
ದೀಪಾವಳಿ ಆಚರಣೆ ವೇಳೆ ಸರಯೂ ನದಿ ತೀರದಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆಯೂ ಮಾತನಾಡಿರುವ ಯೋಗಿ ಆದಿತ್ಯನಾಥ್, ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣವಾಗಲಿದ್ದು, ಅದು ಪ್ರವಾಸಿಗರ ಆಕರ್ಷಣೆಯಾಗಲಿದೆ. ಪ್ರತಿಮೆ ಎಲ್ಲಿ ನಿರ್ಮಾಣವಾಗಬೇಕು ಎಂಬುದನ್ನು ಸ್ಥಳ ಪರಿಶೀಲನೆ ಮಾಡಿ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಆ ಪ್ರತಿಮೆ ಅಯೋಧ್ಯೆಯ ಹೆಗ್ಗುರುತಾಗಲಿದೆ. ಅಯೋಧ್ಯೆಗೆ ಹೊಸ ಗುರುತನ್ನು ನೀಡುವ ರೀತಿಯಲ್ಲಿ ರಾಮನ ಪ್ರತಿಮೆಯನ್ನು ವಿನ್ಯಾಸ ಮಾಡಲಾಗುವುದು. ರಾಮಮಂದಿರದ ಒಳಾಂಗಣದಲ್ಲಿ ಪ್ರತಿಮೆ ನಿರ್ಮಿಸಲಿದ್ದು, ಇತ್ತೀಚೆಗೆ ಲೋಕಾರ್ಪಣೆಗೊಂಡ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಪ್ರತಿಮೆಯಂತೇ ಇದೂ ಬೃಹತ್ ಯೋಜನೆಯಾಗಿಲಿದೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
