ಬರೇಲಿ:
ಭೀಕರ ಅಪಘಾತದಲ್ಲಿ ಉತ್ತರಾಖಂಡದ ಸಚಿವರೊಬ್ಬರ ಪುತ್ರ ಅಸುನೀಗಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಫರಿದ್ಬುರದಲ್ಲಿ ಸಂಭವಿಸಿದೆ.
ಉತ್ತರಾಖಂಡದ ಸಚಿವ ಅರವಿಂದ್ ಪಾಂಡೆ ಅವರ ಪುತ್ರ ಅಂಕುರ್ ಪಾಂಡೆ ಮೃತ ದುರ್ದೈವಿ. ಅಂಕುರ್ ಪಾಂಡೆ ಸೇರಿ ಮತ್ತಿತರರು ಮದುವೆಗೆಂದು ಗೋರಖ್ಪುರಕ್ಕೆ ಕಾರಿನಲ್ಲಿ ತೆರಳುತ್ತಿದ್ದರು.
Bareilly: Uttarakhand Minister Arvind Pandey's son Ankur Pandey died after the car he was travelling in, collided with a truck on NH 24 near Faridpur at around 3 am today. Two others also died& one was injured in the accident. They were going to Gorakhpur to attend a wedding. pic.twitter.com/tP0c8W5cLw
— ANI UP (@ANINewsUP) June 26, 2019
ಉತ್ತರಪ್ರದೇಶದ ಬರೇಲಿ ಜಿಲ್ಲೆಯ ಫರಿದಾಬಾದ್ ಬಳಿ ಇಂದು ನಸುಕಿನ 3 ಗಂಟೆಯ ವೇಳೆ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಕಾರು ನಜ್ಜುಗುಜ್ಜಾಗಿದೆ. ಪರಿಣಾಮ ಅಂಕುರ್ ಪಾಂಡೆ ಸೇರಿ ಒಟ್ಟು ಮೂವರು ಮೃತಪಟ್ಟಿದ್ದು ಇನ್ನೋರ್ವರಿಗೆ ಗಂಭೀರ ಗಾಯವಾಗಿದೆ.
ಈ ಘಟನೆಯಲ್ಲಿ ಗಾಯಗೊಂಡಿರುವ ಯುವಕನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ