ಬೆಂಗಳೂರು:
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ಮನೆಯನ್ನು ವಿಜಯ ಬ್ಯಾಂಕಿನ ಸಿಬ್ಬಂದಿ ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ವಾಟಾಳ್ ವಿಜಯ ಬ್ಯಾಂಕಿನಿಂದ ಗೃಹ ಸಾಲವನ್ನು ಪಡೆದಿದ್ದರು. ಗೃಹ ಸಾಲದ 12 ಲಕ್ಷ ರೂ. ಹಣವನ್ನು ವಾಟಾಳ್ ಪಾವತಿಸಬೇಕಿತ್ತು. ಈ ಹಣವನ್ನು ಪಾ ವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು, ಆದರೆ ಮೂರು ನೋಟಿಸ್ ಕಳುಹಿಸಿದರೂ ವಾಟಾಳ್ ನಾಗರಾಜ್ ಅವರು ಉತ್ತರ ನೀಡಿರಲಿಲ್ಲ.
ಇಂದು ಜಯ ಬ್ಯಾಂಕ್ ಸಿಬ್ಬಂದಿ ಆಗಮಿಸಿದ್ದಾರೆ. ಸಾಲದ ನೋಟಿಸ್ ಗೆ ಉತ್ತರ ನೀಡಿದ ಹಿನ್ನೆಲೆಯಲ್ಲಿ ಈಗ ಬ್ಯಾಂಕ್ ಸಿಬ್ಬಂದಿ ವಾಟಾಳ್ ಮನೆಯನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ