ವೀರಪ್ಪನ್​ ಪುತ್ರಿ ಬಿಜೆಪಿ ಯುವ ಮೋಚಾ ಉಪಾಧ್ಯಕ್ಷೆ ಪಟ್ಟ!!

ಚೆನ್ನೈ: 

    ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾರಾಣಿ ಅವರಿಗೆ ತಮಿಳುನಾಡು ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.

      2020ರ ಫೆಬ್ರವರಿಯಲ್ಲಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಂದಿನಿಂದಲೂ ಪಕ್ಷದ ಯುವಘಟಕದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದೀಗ ಆಕೆಗೆ ಯುವ ಮೋರ್ಚಾದ ಉಪಾಧ್ಯಕ್ಷೆ ಹುದ್ದೆ ದೊರೆತಿದೆ.

    ಈಕೆಯ ಜೊತೆಗೆ ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್​ ಅವರ ಸಂಬಂಧಿಕರು ಕೂಡ ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಯಾಗಿ ನೇಮಕವಾಗಿದ್ದಾರೆ.

     ಕನ್ನಡದ ವರನಟ ಡಾ. ರಾಜ್​ಕುಮಾರ್​ ಅವರನ್ನು ಅಪಹರಿಸಿದ್ದ ಕಾಡುಗಳ್ಳ ವೀರಪ್ಪನ್​, 2004ರಲ್ಲಿ ತಮಿಳುನಾಡು ರಾಜ್ಯ ಪೊಲೀಸ್​ನ ವಿಶೇಷ ಕಾರ್ಯಪಡೆಯ ಗುಂಡಿಗೆ ಬಲಿಯಾಗಿದ್ದ. ಈತನ ಪುತ್ರಿ ಈಗ ರಾಜಕೀಯವಾಗಿ ಜೀವನಕಟ್ಟಿಕೊಳ್ಳಲು ಯತ್ನಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap