ಬೆಂಗಳೂರು:
ರಾಜ್ಯದಲ್ಲಿ ಕೊವಿಡ್-19 ಭೀತಿ ಹೆಚ್ಚಾಗಿದ್ದು, ವಿಧಾನಸೌಧದ ಮೇಲೂ ಪರಿಣಾಮ ಬೀರಿದ್ದು, ವಿಧಾನಸಭೆ- ವಿಧಾನಪರಿಷತ್‍ನ ಸಭಾಂಗಣ ಹಾಗೂ ಮೊಗಸಾಲೆಗಳಿಗೆ ವೈರಾಣು ನಿರೋಧಕವನ್ನು ಸಿಂಪಡಣೆ ಮಾಡಲಾಗಿದೆ.
ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಸರ್ಕಾರ ಮತ್ತಷ್ಟು ಹೆಚ್ಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಮೊಗಸಾಲೆ, ಸಭಾಂಗಣ, ಶಾಸಕರು ಬಳಸುವ ಮೈಕ್, ಮೇಜುಗಳಿಗೆ ವೈರಸ್ ನಿರೋಧಕವನ್ನು ಸಿಂಪಡಿಸಿ ಶುಚಿಗೊಳಿಸಲಾಗಿದೆ.
ಪ್ರವೇಶದ್ವಾರದಿಂದ ಹಿಡಿದು ಸದನದ ಒಳಗೆಲ್ಲಾ ಸ್ಯಾನಿಟೈಜರ್ ಸ್ಪ್ರೇ ಸಿಂಪಡಿಸಲಾಗುತ್ತಿದ್ದು, ಶಕ್ತಿ ಸೌಧದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಲ್ಲಿ ತಕ್ಷಣವೇ ರಜೆ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಅಲ್ಲದೆ, ಬೆಂಗಳೂರಿನ ಕೆಲ ಪ್ರಮುಖ ಆಸ್ಪತ್ರೆಗಳು ಹಾಗೂ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆಗಳಲ್ಲಿಯೂ ಕೊರೊನಾಗೆ ಚಿಕಿತ್ಸಾ ಕೇಂದ್ರ ತೆರೆಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ