ಬೆಂಗಳೂರು :

ವಿಧಾನ ಸಭೆ ನಡಾವಳಿ ಹಾಗೂ ನಿಯಮಾವಳಿ ಉಲ್ಲಂಘಿಸಿ ವಿಧಾನಸಭೆ ಸಭಾಂಗಣದ ಒಳ ಪ್ರವೇಶಿಸಲು ಮುಂದಾದ ನಗರ ಪೊಲೀಸ್ ಆಯುಕ್ತರನ್ನು ಮಾರ್ಷಲ್ ಗಳು ತಡೆ ಹಿಡಿದ ಘಟನೆ ನಡೆಯಿತು.
ಇಂದು ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲರ ಜೊತೆ ಆಗಮಿಸಿದ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ವಿಧಾನಸಭೆ ಸಭಾಂಗಣದ ಒಳಗೆ ಹೋಗುವ ವೇಳೆ ರಾಜ್ಯಪಾಲರು ಸಭಾಂಗಣ ಪ್ರವೇಶ ಮಾಡಿದ ಕೂಡಲೇ ಬಾಗಿಲು ಮುಚ್ಚಲಾಯಿತು. ಈ ವೇಳೆ ನಗರ ಪೊಲೀಸ್ ಆಯುಕ್ತರು ಬಾಗಿಲ ಹಿಂದೆ ಇದ್ದರು. ಬಳಿಕ ಒಳಪ್ರವೇಶಿಸಲು ಭಾಸ್ಕರ್ ರಾವ್ ಮುಂದಾದರು. ಆದರೆ ಮಾರ್ಷಲ್ ಗಳು ಅವರನ್ನು ಒಳಗೆ ಬಿಡಲಿಲ್ಲ. 
ವಿಧಾನ ಮಂಡಲದ ನಿಯಮಗಳ ಪ್ರಕಾರ ಖಾಕಿ ಸಮವಸ್ತ್ರ ತೊಟ್ಟವರು ವಿಧಾನಸಭೆ ಸಭಾಂಗಣ ಪ್ರವೇಶ ಮಾಡುವಂತೆ ಇಲ್ಲ. ಹೀಗಾಗಿ ಭಾಸ್ಕರ್ ರಾವ್ ರನ್ನು ಮಾರ್ಷಲ್ ಗಳು ತಡೆದರು. ಬಳಿಕ ವಿಧಾನ ಸಭೆ ಲಾಂಜ್ ಬಳಿ ಪೊಲೀಸ್ ಬಳಿಕ ಭಾಸ್ಕರ್ ರಾವ್ ರನ್ನು ಒಳಗೆ ಬಿಡಲಾಯಿತು.
ಸಮವಸ್ತ್ರ ಧರಿಸಿ ವಿಧಾನಸಭೆ ಮೊಗಸಾಲೆಗೆ ಆಯುಕ್ತರು ಬಂದಿದ್ದರಿಂದ, ಇನ್ನು ಮುಂದೆ ಈ ರೀತಿ ಆಗದಂತೆ ಸೂಚನೆ ನೀಡಿ ವಿಧಾನಸಭೆ ಸ್ಪೀಕರ್ ಕಚೇರಿಯಿಂದ ಪೊಲೀಸ್ ಆಯುಕ್ತರ ಕಚೇರಿಗೆ ಸಂದೇಶ ರವಾನೆ ಮಾಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








