ಬೆಂಗಳೂರು:
ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಪ್ರಕರಣ ಸಂಬಂಧ ರಾಜಿ ಮಾಡಿಕೊಳ್ಳುವಂತೆ 3ನೇ ಆರೋಪಿ ಶ್ರೀಕೃಷ್ಣ ಎಂಬಾತ ಸಂತ್ರಸ್ತ ವಿದ್ವತ್ಗೆ ಕರೆ ಮಾಡಿ ಒತ್ತಾಯಿಸುತ್ತಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.
ಈ ನಡುವೆ ಆರೋಪಿ ಕೃಷ್ಣಗಾಗಿ ಸಿಸಿಬಿ ಪೋಲಿಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಿನ್ನಲೆಯಲ್ಲಿ ಆರೋಪಿ ಕೃಷ್ಣನಿಗಾಗಿ ಲುಕ್ ಬೌಟ್ ನೋಟಿಸ್ ಅನ್ನು ಹೊರಡಿಸಿದ್ದಾರೆ.
ಇವೆಲ್ಲದರ ನಡುವೆ ಆರೋಪಿ ಕೃಷ್ಣ ವಿದ್ವತ್ ಗೆ ಕರೆ ಮಾಡಿ ನೀನು ನೀಡಿರುವ ದೂರಿನ ಸಂಬಂಧ ಕೂಡಲೇ ಕೇಸ್ ಅನ್ನು ವಾಪಸ್ಸು ತೆಗೆದುಕೊಂಡು, ರಾಜೀಯಾಗು ಅಂತ ಹೇಳಿದ್ದಾನೆ ಎನ್ನಲಾಗಿದೆ. ಇನ್ನು ವಿದ್ವತ್ ತನಗೆ ಬಂದ ಕರೆಗೆ ಸಂಬಂಧಪಟ್ಟಂತೆ ಸಿಸಿಬಿ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೃಷ್ಣ ಮಾತನಾಡಿರುವ ಮಾತುಗಳನ್ನು ತಿಳಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ನಡುವೆ ಕೂಡಲೇ ಎಚ್ಚೆತ್ತುಕೊಂಡಿರುವ ಸಿಸಿಬಿ ಪೋಲಿಸ್ ಹಿರಿಯ ಅಧಿಕಾರಿಗಳು ವಿದ್ವತ್ ಗೆ ಕೂಡಲೇ ಭದ್ರತೆಯನ್ನು ನೀಡುವಂತೆ ಪೊಲೀಸರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ