ಸೋಮವಾರ ರಾತ್ರಿ 7.30ರ ವೇಳೆಗೆ ಬೆಂಗಳೂರು ಶೇಷಾಂದ್ರಿಪುರಂ ನಲ್ಲಿರುವ ಅಪೋಲೋ ಆಸ್ಪತ್ರೆಯಿಂದ ಆನಂದ್ ಸಿಂಗ್ ಡಿಸ್ಚಾರ್ಜ್ ಆಗಿದ್ದಾರೆ.
ಜನವರಿ 19ರಂದು ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರು ವಾಸ್ತವ್ಯ ಹೂಡಿದ್ದ ಸಮಯ ಕಂಪ್ಲಿ ಶಾಸಕ ಗಣೇಶ್ ಅವರಿಂದ ಆನಂದ್ ಸಿಂಗ್ ಹಲ್ಲೆಗೀಡಾಗಿದ್ದರು. ಗಣೇಶ್ ಆನಂದ್ ಸಿಂಗ್ ಅವರ ತಲೆ, ಕಣ್ಣು, ಎದೆ ಭಾಗಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಕುಟುಂಬ ಪೋಲೀಸರಿಗೆ ದೂರಿತಿತ್ತು. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಅಮಾನತು ಮಾಡಲಾಗಿದೆ.
ಅಪೋಲೋ ಆಸ್ಪತ್ರೆಯ ವೈದ್ಯರು ಒಂದು ವಾರ ಚಿಕಿತ್ಸೆಯ ಅಗತ್ಯವಿದೆ ಎಂದು ಹೇಳಿದ್ದರು. ಆನಂದ್ ಸಿಂಗ್ ಸಹ ಇನ್ನೂ ಒಂದು ವಾರ ಚಿಕಿತ್ಸೆ ನಡೆಯಲಿದೆ ಎಂದು ತಿಳಿಸಿದ್ದರು. ಆದರೆ ಆನಂದ್ ಸಿಂಗ್ ಆಸ್ಪತ್ರೆಯಿಂದ ದಿಢೀರ್ ಆಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಪತ್ನಿ, ಮಕ್ಕಳಲ್ಲದೆ ಹಲವಾರು ಬೆಂಬಲಿಗರು ಆನಂದ್ ಸಿಂಗ್ ಅವರ ಜೊತೆಯಲ್ಲಿದ್ದರು.