ಮಂಗಳೂರು:
ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಹಾಳು ಮಾಡದಂತೆ ಉಳಿಸಿಕೊಳ್ಳುವುದು ಉತ್ತಮ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಧರ್ಮಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ಮಾಡುವ ನಿಯಮವಿದೆ. ಮನೋನಿಗ್ರಹ, ಸಂಯಮದ ಪಾಲನೆ ಅಲ್ಲಿ ಮುಖ್ಯವಾಗುತ್ತದೆ. ವ್ರತ ನಿಷ್ಠರು ಮಹಿಳೆಯರು ಮಾಡಿದ ಆಹಾರವನ್ನೂ ಸ್ವೀಕರಿಸುವುದಿಲ್ಲ. ಮಹಿಳೆಯರ ದರ್ಶನದಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ ಬರಬಹುದು. ಪಾವಿತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದಿದ್ದಾರೆ.
ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ. ವಿದೇಶದಲ್ಲೂ ಈ ರೀತಿಯ ನಿರ್ಬಂಧಗಳಿವೆ. ಹಾಗಂತ ದೇವಸ್ಥಾನಕ್ಕೆ ಹೋದರೆ ಏನೂ ಆಗದು. ಮನೆಯಲ್ಲೂ ದೇವರ ಆರಾಧನೆ ಮಾಡಬಹುದು. ಹಳೆ ಪದ್ಧತಿ ಉಳಿಸಿಕೊಳ್ಳುವುದು ಉತ್ತಮ ಎಂಬುದಷ್ಟೆ ತಮ್ಮ ಅಭಿಪ್ರಾಯ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
