ಗತವೈಭವದತ್ತ “ವಿರೂಪಾಕ್ಷ ಬಜಾರ್”

ಬಳ್ಳಾರಿ:
         ಹಂಪಿ ಎಂದಾಕ್ಷಣ ನೆನಪಿಗೆ ಬರುವುದು ಬರೀ ಆಕ್ರಮಣಗಳಿಂದ ಹಾಳಾದ ಪ್ರದೇಶ ಎಂದು ಎಲ್ಲರು ತಿಳಿದಿರುವ ಹೊತ್ತಿನಲ್ಲಿ ಈಗ ಹಂಪೆಯ ಸ್ಮಾರಕಗಳ ಮರು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ ಅದರಲ್ಲಿ ತುಂಬಾ ಗಮನಾರ್ಹವಾಗಿ ‘ವಿರೂಪಾಕ್ಷ ಬಜಾರ್’ ಅದರ ಮರು ನಿರ್ಮಾಣಕ್ಕೆ  ಭಾರತೀಯ ಪುರಾತತ್ವ ಇಲಾಖೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ ಕೈಹಾಕಿವೆ. 
         ವಿರೂಪಾಕ್ಷ ಬಜಾರ್ ಮರು ನಿರ್ಮಾಣಕ್ಕಾಗಿ ಭಾರತೀಯ ಪುರಾತತ್ವ ಇಲಾಕೆ ಇದೇ ಮೊದಲ ಬಾರಿಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸಲಹೆ ಸೂಚನೆಗಲನ್ನು ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ .ವಿರೂಪಾಕ್ಷ ಬಜಾರ್ ನಲ್ಲಿದ್ದ ಮಂಟಪಗಳನ್ನು ಹಿಂದಿನಂತೆಯೇ ಮರು ನಿರ್ಮಾಣ ಮಾಡಲಾಗುತ್ತದೆ ಎಂದು ಪುರಾತತ್ತವ ಶಾಸ್ತ್ರಜ್ಞ ಎಂ.ಕಾಳಿಮುತ್ತು ಅವರು ತಿಳಿಸಿದ್ದಾರೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ