ಮುಂಬೈ :
ಯಾರೇ ಮನವೊಲಿಸಿದರೂ ತಾವು ವಿಶ್ವಾಸಮತಯಾಚನೆಗೆ ನಾವು ಬರುವುದಿಲ್ಲ ಎಂದು ಅತೃಪ್ತ ಶಾಸಕರು ತಮ್ಮ ನಿಲುವನ್ನು ಮತ್ತೆ ಸ್ಪಷ್ಟಪಡಿಸಿದ್ದಾರೆ.
ರಾಜೀನಾಮೆ ನೀಡಿರುವ 15 ಶಾಸಕರು ಅಧಿವೇಶನದಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಹಾಜರಾಗಬೇಕೋ ಬೇಡವೋ ಎನ್ನುವುದು ಶಾಸಕರ ವಿವೇಚನೆಗೆ ಬಿಟ್ಟ ವಿಚಾರ ಎಂದು ಸುಪ್ರೀಂ ತೀರ್ಪು ನೀಡಿದೆ.
ಈ ಕುರಿತು ತಾವು ಈ ಹಿಂದೆ ಹೇಳಿದಂತೆ ಮುಂಬೈಯಿಂದ ಇಂದು ವಿಡಿಯೊ ಸಂದೇಶ ಕಳುಹಿಸಿರುವ ಅತೃಪ್ತ ಶಾಸಕರು, ಸುಪ್ರೀಂ ಕೋರ್ಟ್ ತೀರ್ಪಿನಿಂದ ನಮಗೆ ಖುಷಿಯಾಗಿದೆ. ಅದನ್ನು ಗೌರವಿಸುತ್ತೇವೆ ನಮಗೆ ಕೋರ್ಟ್ ತೀರ್ಪು ಮೇಲೆ ವಿಶ್ವಾಸವಿದೆ, ನಮ್ಮ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ತೀರ್ಪು ನೀಡಿದೆ. ನಾಳೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವುದಿಲ್ಲ. ವಿಶ್ವಾಸಮತಕ್ಕೆ ಯಾರೇ ಮನವೊಲಿಸಿದರೂ ನಾವು ಬರುವುದಿಲ್ಲ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅತೃಪ್ತ ಕಾಂಗ್ರೆಸ್-ಜೆಡಿಎಸ್ ಶಾಸಕರು ರಾಜೀನಾಮೆ ನೀಡಿ, ಮುಂಬೈನ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ. ನಾಳೆ ವಿಶ್ವಾಸಮತ ಸಾಭೀತು ಪಡಿಸುವ ವೇಳೆ ಈ ಶಾಸಕರು ಬಾರದೇ ಹೋದರೇ, ದೋಸ್ತಿ ಸರ್ಕಾರ ಬಿದ್ದು ಹೋಗೋದು ನಿಜ ಎಂದು ಅನೇಕ ರಾಜಕೀಯ ನಾಯಕರ ವಿಶ್ಲೇಷಣೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ