ಬೆಂಗಳೂರು : ಡ್ರೋನ್ ಮೂಲಕ ಸ್ಯಾನಿಟೈಸ್ ಸಿಂಪಡಣೆ!!

ಬೆಂಗಳೂರು :

   ನಗರದ ಪ್ರತಿಯೊಂದು ವಾರ್ಡ್‌ನಲ್ಲೂ ಡ್ರೋನ್ ಮೂಲಕ ಸೋಂಕು ನಿವಾರಕ ರಾಸಾಯನಿಕವನ್ನು ಸಿಂಪಡಣೆ ಮಾಡಲು  ರಾಜ್ಯ ಸರ್ಕಾರ ಮುಂದಾಗಿದೆ.

     ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಏನೇ ಮಾಡಿದರು ಸೋಂಕಿನ ತೀವ್ರತೆಯನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಇಂತಹ ಸಾಹಸಕ್ಕೆ ಕೈ ಹಾಕಿದೆ ಎನ್ನಲಾಗಿದೆ.

      ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ರವಿಸುಬ್ರಮಣ್ಯ ಅವರಿಂದ ಚಾಲನೆ ನೀಡಲಾಗಿದ್ದು, ಜಯನಗರದ 3 ನೇ ಬ್ಲಾಕ್‌ನಲ್ಲಿ ಇಂದಿನಿಂದ ರಾಸಾಯನಿಕ ಸಿಂಪಡಣೆ ಕೆಲಸ ಆರಂಭವಾಗಿದೆ. 

      ಮೊದಲ ಹಂತದಲ್ಲಿ ಬೆಂಗಳೂರಿನ ಯಾವ ಯಾವ ಭಾಗದಲ್ಲಿ ಹೆಚ್ಚಿನ ಸೋಂಕಿನ ಪ್ರಕರಣಗಳಿವೆಯೋ ಅಂತಹ ಕಡೆ ದ್ರೋಣ್ ಮೂಲಕವೇ ಸ್ಯಾನಿಟೈಸರ್ ಮಾಡಲಾಗುತ್ತದೆ. ಸದ್ಯಕ್ಕೆ ಮೊದಲ ಹಂತದಲ್ಲಿ 25 ದ್ರೋಣ್‍ಗಳನ್ನು ಚೆನ್ನೈನಿಂದ ಖರೀದಿ ಮಾಡಲಾಗಿದೆ. 50 ಮೀಟರ್ ಉದ್ದವಿರುವ ಈ ದ್ರೋಣ್‍ಗಳಲ್ಲಿ 16 ಲೀಟರ್ ದ್ರಾವಣವನ್ನು ಮಿಶ್ರಣಮಾಡಿ ಸಿಂಪಡಣೆ ಮಾಡಬಹುದಾಗಿದೆ.

     ಚೆನ್ನೈ , ಮುಂಬೈ, ನವದೆಹಲಿ ಸೇರಿದಂತೆ ಮತ್ತಿತರ ಕಡೆ ದ್ರೋಣ್‍ನಿಂದ ಸ್ಯಾನಿಟೈಸರ್ ಮಾಡಿದ ಪರಿಣಾಮ ಕೊಂಚ ಸೋಂಕು ಹಬ್ಬುವುದು ಇಳಿಮುಖವಾಗಿತ್ತು. ಈಗ ಬೆಂಗಳೂರಿನಲ್ಲಿ ಈ ಮಾದರಿಯನ್ನು ಪಾಲಿಕೆ ಮುಂದಾಗಿದೆ.

    ಒಂದು ವೇಳೆ ಇನ್ನು ಒಂದು ವಾರದೊಳಗೆ ಇದು ಯಶಸ್ವಿಯಾಗಿ ಕಂಡುಬಂದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ದ್ರೋಣ್‍ಗಳನ್ನು ಖರೀದಿಸಿ ಸ್ಯಾನಿಟೈಸರ್ ಮಾಡುವ ಮೂಲಕ ಸೋಂಕು ಒಬ್ಬರಿಂದ ಒಬ್ಬರಿಗೆ ತಡೆಗಟ್ಟಲು ಪಾಲಿಕೆ ತೀರ್ಮಾನಿಸಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap