ಮಾಸ್ಕ್ ಧರಿಸದೆ ನಂದಿಹಿಲ್ಸ್​​ಗೆ ಬಂದ್ರೆ ನೋ ಎಂಟ್ರಿ!!

ಚಿಕ್ಕಬಳ್ಳಾಪುರ :

     ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಇಂದಿನಿಂದ ಪ್ರವಾಸಿಗರ ಭೇಟಿಗೆ ಅನುಮತಿ ನೀಡಲಾಗಿದೆ. ಆದ್ರೆ ಮಾಸ್ಕ್​ ಧರಿಸದೇ ಬರುವವರಿಗೆ ಎಂಟ್ರಿ ಇಲ್ಲ. ಅಂಥವರನ್ನ ವಾಪಸ್​ ಕಳಿಸಲಾಗುತ್ತಿದೆ.

     ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ಇಂದಿನಿಂದ ನಂದಿಗಿರಿಧಾಮ ಪ್ರವೇಶಕ್ಕೆ ಅನುಮತಿ ನೀಡಿದ್ದು, ಪೊಲೀಸರು ಚೆಕ್ ಪೋಸ್ಟ್ ಬಳಿಯೇ ತಪಾಸಣೆ ಮಾಡುತ್ತಿದ್ದಾರೆ. ಗಿರಿಧಾಮದ ದ್ವಾರ ಬಾಗಿಲಿನಲ್ಲಿ ಪ್ರವಾಸಿಗರಿಗೆ ಥರ್ಮಲ್​ ಸ್ಕ್ರೀನಿಂಗ್​ ಮಾಡಿ ನಂತರ ಪ್ರವೇಶ ನೀಡಲಾಗುತ್ತಿದೆಮಾಸ್ಕ್ ಧರಿಸದೇ ನಂದಿಗಿರಿಧಾಮಕ್ಕೆ ಬಂದರೆ ವಾಪಸ್ ಕಳುಹಿಸಲಾಗುತ್ತಿದೆ.

     ಕೊರೊನಾ ಲಾಕ್​ಡೌನ್ ​ಹಿನ್ನೆಲೆಯಲ್ಲಿ ನಂದಿಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿತ್ತು. ಇಂದಿನಿಂದ ನಿರ್ಬಂಧ ತೆರವಾಗಿದೆ. ಪೊಲೀಸರು ಚೆಕ್​ಪೋಸ್ಟ್ ​ಬಳಿಯೇ ತಪಾಸಣೆ ಮಾಡುತ್ತಿದ್ದು, ಯಾರು ಮಾಸ್ಕ್​ ಧರಿಸಿಲ್ಲವೋ ಅವರನ್ನು ಒಳಗೆ ಬಿಡದೇ ವಾಪಸ್​ ಕಳಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap