ಬೆಂಗಳೂರು :ಬಳ್ಳಾರಿಯ ಲೋಕಸಭಾ ಉಪಚುನಾವಣೆಯ ಕಣದಲ್ಲಿ ಅಭ್ಯರ್ಥಿಯಾಗಿರುವ ವಿ.ಎಸ್.ಉಗ್ರಪ್ಪ ವಿರುದ್ಧ ಮಹಿಳೆಯೊಬ್ಬರು ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಸಿಂಗ್ ಎಂಬ ಮಹಿಳೆ, ನಾನು ಶಿವಮೊಗ್ಗ ಮೂಲದವಳು, ಓದಿದ್ದು ಮಾತ್ರ ಬೆಂಗಳೂರಿನಲ್ಲಿ. ನಾನು ಕ್ಯಾನ್ಸರ್ ಪೀಡಿತೆ, ಮಗಳು ಅಳುತ್ತಿದ್ದಳು, ಅದಕ್ಕೆ ನನ್ನ ಖಾಯಿಲೆ ಕಾರಣ ಎಂದುಕೊಂಡಿದ್ದೆ, ಆದರೆ ಅಸಲಿ ವಿಷಯ ಬೇರೆಯೇ ಇತ್ತು. ನನ್ನ ಮಗಳ ಮೇಲೆ ನನ್ನ ನಾದಿನಿ ಮಗನಿಂದ ಒಂದು ವರ್ಷ ನಿರಂತರವಾಗಿ (2014 ಫೆ. ಯಿಂದ ನವೆಂಬರ್ 2015ರವರೆಗೆ) ನನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷರಾಗಿದ್ದ ಉಗ್ರಪ್ಪ ಅವರನ್ನು ಭೇಟಿಯಾಗಿದ್ದೆ. ಅವರು ನ್ಯಾಯ ಕೊಡಿಸುವ ಬದಲು ದೂರು ವಾಪಸ್ ಪಡೆಯಿರಿ ಎಂದು ನನ್ನ ಮೇಲೆ ಒತ್ತಡ ಹೇರಿದ್ದರು.
ವಕೀಲರಾಗಿ, ಪರಿಷತ್ ಸದಸ್ಯರಾಗಿ ಉಗ್ರಪ್ಪ ನಮಗಾದ ಅನ್ಯಾಯಕ್ಕೆ ನೆರವು ನೀಡದೇ, ಒಂದು ರೀತಿಯಲ್ಲಿ ತಪ್ಪಿತಸ್ಥ ರಿಗೆ ರಕ್ಷಣೆ ಮಾಡಿದ್ದಾರೆ. ಒಂದು ಮಗುವಿಗೆ ನ್ಯಾಯಕೊಡಿಸದ ಅವರು ಬಳ್ಳಾರಿ ಜನತೆಗೆ ಹೇಗೆ ರಕ್ಷಣೆ ನೀಡುತ್ತಾರೆ.? ಇಂತಹವರು ಜನಪ್ರತಿನಿಧಿಯಾಗಲು ಸೂಕ್ತವೇ? ಎಂದು ಮಮತಾ ಸಿಂಗ್ ಉಗ್ರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ