ಏ.10 ರಂದು ಮಹಿಳಾ ಆಯೋಗದಿಂದ ತೇಜಸ್ವಿ ವಿಚಾರಣೆ!!

ಬೆಂಗಳೂರು:

     ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರಿಗೆ ಏ. 10 ರಂದು ವಿಚಾರಣೆಗೆ ಹಾಜರಾಗುವಂತೆ ಮಹಿಳಾ ಆಯೋಗ ಸೂಚಿಸಿದೆ.

      ಮಹಿಳಾ ಆಯೋಗ ತೇಜಸ್ವಿ ವಿರುದ್ದ ಜಾರಿಮಾಡಿದ್ದ ನೋಟಿಸ್ ಅನುಸಾರ , ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ತೇಜಸ್ವಿ ಪರ ವಕೀಲರ ಮನವಿ‌ ಮೇರೆಗೆ ಏ. 10 ರವರೆಗೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗ ಲಕ್ಷ್ಮೀ ಬಾಯಿ ತಿಳಿಸಿದ್ದಾರೆ.

      ಮೀ ಟೂ ಆರೋಪದಡಿ ಕಾಂಗ್ರೆಸ್ ಮಹಿಳಾ ಘಟಕ ತೇಜಸ್ವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು‌ ನೀಡಿತ್ತು. ತೇಜಸ್ವಿ ಅವರಿಂದ ನೊಂದಿರುವುದಾಗಿ ಹೇಳಿಕೊಂಡಿದ್ದ ಮಹಿಳೆಯೊಬ್ಬರ ಟ್ವೀಟ್ ಆಧರಿಸಿ ಈ ದೂರು ಸಲ್ಲಿಸಲಾಗಿದೆ. ಇನ್ನೊಂದೆಡೆ, ತಮಗೆ ಇದೂವರೆಗೆ ಯಾವುದೇ ನೋಟಿಸ್ ತಲುಪಿಲ್ಲ ಎಂದು ತೇಜಸ್ವಿ ಸೂರ್ಯ ಪರ ವಕೀಲ ಸಂದೀಪ್ ಸ್ಪಷ್ಟಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap