ಉಡುಪಿ :
ಸ್ನೇಹಿತರಿಬ್ಬರು ಫಾಲ್ಸ್ ತುದಿಯಲ್ಲಿ ಸೆಲ್ಫೀ ಕ್ಲಿಕ್ಕಿಸುತ್ತಿದ್ದ ವೇಳೆ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿ ಹೋದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿ ಗುರುವಾರ ಸಂಜೆ ನಡೆದಿದೆ.
ನಂದಳಿಕೆಯ ಅಬ್ಬನಡ್ಕ ಗ್ರಾಮದ ಸುದೇಶ್ ಸ್ನೇಹಿತರಾದ ರಾಕೇಶ್, ಭರತ್ ಪೂಜಾರಿ ಹಾಗೂ ಸಂತೋಷ್ ಜೊತೆ ಫಾಲ್ಸ್ ನೋಡಲು ಬಂದಿದ್ದ. ಈ ಸಂದರ್ಭ ಎಲ್ಲರೂ ಒಟ್ಟಾಗಿ ಸೆಲ್ಫಿ ತೆಗೆದುಕೊಳ್ಳಲು ಹೋದಾಗ ಸುದೇಶ್ ಹಾಗೂ ಭರತ್ ನೀರಿಗೆ ಬಿದ್ದಿದ್ದಾರೆ.
ಭರತ್ ಈಜಿ ದಡ ಸೇರಿದರೆ, ಸುದೇಶ್ ನೀರಿನ ಸೆಳೆತಕ್ಕೆ ಸಿಕ್ಕು ಕೊಚ್ಚಿಕೊಂಡು ಹೋಗಿದ್ದಾರೆ. 150 ಮಂದಿ ಶೋಧ ಕಾರ್ಯಾಚರಣೆ ನಡೆಸಿದರೂ ಪತ್ತೆಯಾಗಿಲ್ಲ.
ಸದ್ಯ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ತಹಶಿಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ