ಮಡಿಕೇರಿ:
ಮೊಬೈಲ್ ಕರೆನ್ಸಿ ಹಾಕಿಸಲು ಬರುವ ಯುವತಿಯರ ಮತ್ತು ವಿವಾಹಿತ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಮಡಿಕೇರಿಯಲ್ಲಿ ಬುಧವಾರ ನಡೆದಿದೆ.
ನಗರದಲ್ಲಿನ ಮೊಬೈಲ್ ಅಂಗಡಿ ಹಾಗೂ ಕರೆನ್ಸಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದ ಮುದಾಸಿರ್ ಎಂಬ ಪೋಲಿಯೇ ಮಹಿಳೆಗೆ ಸಂದೇಶ ಕಳುಹಿಸುತ್ತಿದ್ದ ಎನ್ನಲಾಗಿದೆ.
ತಮ್ಮ ಮೊಬೈಲ್‍ಗಳಿಗೆ ಕರೆನ್ಸಿ ಹಾಕಿಸುವ ಯುವತಿಯರ ಹಾಗೂ ಮಹಿಳೆಯ ಮೊಬೈಲ್ ಸಂಖ್ಯೆ ಬರೆದುಕೊಂಡು ಅದಕ್ಕೆ ಅಶ್ಲೀಲ ಸಂದೇಶ ಕಳುಹಿಸಿ, ಕಿರುಕುಳು ನೀಡುತ್ತಿದ್ದ ಎನ್ನಲಾಗಿದೆ.
ಆರೋಪಿ ಕಳೆದ ಎರಡು ದಿನಗಳಿಂದ ರಾತ್ರಿ-ಹಗಲು ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಮಹಿಳೆ ದೂರಿದ್ದಾರೆ. ಈತನನ್ನು ಖೆಡ್ಡಾಕ್ಕೆ ಬೀಳಿಸಲು ಪ್ಲಾನ್ ಮಾಡಿದ್ದ ಮಹಿಳೆ, ಸಾಮಾಜಿಕ ಕಾಳಜಿ ಉಳ್ಳ ಕೊಡಗು ರಕ್ಷಣಾ ವೇದಿಕೆ ಗೆ ದೂರು ನೀಡಿದ್ದರು.
ಯುವತಿಯ ರೊಂದಿಗೆ ಅಶ್ಲೀಲ ಚಾಟ್ ಮಾಡುತ್ತಿದ್ದ ಕಾಮಣ್ಣನಿಗೆ ಚಪ್ಪಲಿ ಸೇವೆ
ಕೊಡಗಿನ ಮಡಿಕೇರಿಯಲ್ಲಿ ವಿವಾಹಿತ ಮಹಿಳೆಯರ ಹಾಗು ಯುವತಿರ ನಂಬರ್ ಗಳನ್ನು ಪಡೆದುಕೊಂಡು ಅಶ್ಲಿಲವಾಗಿ ಚಾಟ್ ಮಾಡುತ್ತಾ , ಬೇಟಿಯಾಗಲು ಒತ್ತಾಯಿಸುತ್ತಾ ಇದ್ದ ಕಾಮುಕನಿಗೆ ಮಹಿಳೆಯೊಬ್ಬರು ಚಪ್ಪಲಿಯಿಂದ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಮಡಿಕೇರಿ ಹೆದ್ದಾರಿಯಲ್ಲಿ ನಡೆದಿದೆ.
Posted by The Mangalore Mirror on Wednesday, September 16, 2020
ಯುವಕನಿಗೆ ಬುದ್ಧಿ ಕಲಿಸಲು ವೇದಿಕೆ ಸದಸ್ಯರು ಯೋಜನೆ ರೂಪಿಸಿ, ಆ ಮಹಿಳೆಯ ಮೊಬೈಲ್ ಮೂಲಕವೇ ‘ಹಳೇ ಆರ್‌ಟಿಒ ಕಚೇರಿ ಬಳಿಗೆ ಬಂದರೆ ಮಾತನಾಡೋಣ’ ಎಂಬ ಸಂದೇಶ ಕಳುಹಿಸಿದ್ದರು.
ಅಲ್ಲಿಗೆ ಬಂದ ಯುವಕನಿಗೆ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಮಹಿಳೆ ಥಳಿಸಿದ್ದಾರೆ. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಈಗ ಥಳಿಸಿದವರು ಮೇಲೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ