ಬೆಂಗಳೂರು:
ಖೋಟಾ ನೋಟು ತಯಾರಿಸಿ, ಮಾರಾಟ ಮಾಡುತ್ತಿದ್ದ ಕ್ಯಾಮರೋನ್ ದೇಶದ ಪ್ರಜೆಯನ್ನು ಬಂಧಿಸಿ, ಬಂಧಿತ ಆರೋಪಿಯಿಂದ ಸಿಸಿಬಿ ಪೊಲೀಸರು 33.70 ಲಕ್ಷ ಮೊಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಬಾಣಸವಾಯಿ ಮುಖ್ಯರಸ್ತೆಯ ಸುಬ್ಬಯ್ಯನಪಾಳ್ಯದಲ್ಲಿ ಖೋಟಾ ನೋಟು ತಯಾರಿಸಿ, ಚಲಾಯಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ, ಸಿಸಿಬಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ ಖೋಟಾ ನೋಟು ಜಾಲವನ್ನು ಬೇಧಿಸಿದ್ದಾರೆ.
ಸಿಸಿಬಿ ಪೊಲೀಸರ ದಾಳಿಯ ವೇಳೆ, ಮನೆಯ ಎರಡನೆಯ ಮಹಡಿಯಲ್ಲಿ ಕ್ಯಾಮರೂನ್ ದೇಶದ ಪ್ರಜೆ, ಡಿಯೋನ್ನೇ ಕ್ರಿಸ್ಪೋಲ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ, ರೂ.2000 ಮುಖಬೆಲೆಯ ಖೋಟಾ ನೋಟುಗಳನ್ನು ಕಲರ್ ಪ್ರಿಂಟರ್ ಮೂಲಕ ಯಥಾವತ್ತಾಗಿ ನಕಲಿಯಾಗಿ ಜೆರಾಕ್ಷ್ ಮಾಡಿ, ಅವುಗಳನ್ನು ಚಲಾವಣೆ ಮಾಡುತ್ತಿದ್ದನು ಎಂಬುದಾಗಿ ಪತ್ತೆ ಹಚ್ಚಿದ್ದಾರೆ.
ಅಂದಹಾಗೇ, ಕಲರ್ ಪ್ರಿಂಟ್ ಮಾಡಿ, ಚಲಾವಣೆ ಮಾಡಲು ತಯಾರಿಸಲಾಗಿದ್ದ ರೂ.33 ಲಕ್ಷದ 70 ಸಾವಿರ ಖೋಟಾ ನೋಟುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಈ ಜಾಲದಲ್ಲಿ ಇನ್ನೂ ಕೆಲವರು ತೊಡಗಿಸಿಕೊಂಡಿರುವ ಸಾಧ್ಯತೆ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ. ಖೋಟಾ ನೋಟು ತಯಾರಿಸಿ ಚಲಾವಣೆ ಮಾಡುತ್ತಿದ್ದ ಕ್ಯಾಮರೋನ್ ದೇಶದ ಪ್ರಜೆಯನು ಬಂಧಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ