ಬೆಂಗಳೂರು:
ಕಿಡ್ನಾಪ್ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಟ ದುನಿಯಾ ವಿಜಿ ಅವರನ್ನು ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸುವಂತೆ ಕನ್ನಡ ಚಳುವಳಿ ಒಕ್ಕೂಟವು ಮನವಿ ನೀಡಿದೆ.
ಮನವಿಯಲ್ಲಿ, ವಿಜಯ್ ಮೇಲೆ ಸಾಲು ಸಾಲು ಪ್ರಕರಣಗಳು ದಾಖಲಾಗಿದ್ದು ನಟನಾಗಿ ಅಭಿಮಾನಿಗಳಿಗೆ ಉತ್ತಮ ಸಂದೇಶವನ್ನು ನೀಡಬೇಕು. ಈ ರೀತಿ ಗೂಂಡಾಗಿರಿ ತೋರಿಸುವುದರಿಂದ ಸಮಾಜಕ್ಕೆ ಕಂಟಕವೆಂದು ಎಂದು ತಿಳಿಸಿದ್ದಾರೆ.
ಒಕ್ಕೂಟದ ಮನವಿಗೆ ಸ್ಪಂದಿಸಿದ ಬೆಂಗಳೂರಿನಲ್ಲಿರುವ ಫಿಲಂ ಚೇಂಬರ್ ನ ಉಪಾಧ್ಯಕ್ಷ ಕೆ.ಮಂಜು ಅವರು ಮಾತನಾಡಿ, ಏಕಾಏಕಿ ಯಾರನ್ನೂ ಬ್ಯಾನ್ ಮಾಡಲಾಗುವುದಿಲ್ಲ, ಫಿಲಂ ಚೇಂಬರ್ ನಡೆಸಲಿರುವ ಸಭೆಯಲ್ಲಿ ಚರ್ಚಿಸಿ, ನಂತರ ವಿಜಿ ಅವರನ್ನು ಚಿತ್ರರಂಗದಿಂದ ಬಹಿಷ್ಕರಿಸಬೇಕೋ, ಬೇಡವೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ