ಬೆಳ್ತಂಗಡಿ: ಪ್ರವಾಹ ಭೀತಿ ; ಜನರ ಸ್ಥಳಾಂತರ!!!

ಮಂಗಳೂರು :

      ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಬೀಳುತ್ತಿರುವುದರಿಂದ ನೇತ್ರಾವತಿ ಹಾಗೂ ಇತರ ಹೊಳೆಗಳು , ಉಪನದಿಗಳು ಉಕ್ಕಿ ಹರಿಯುತ್ತಿವೆ.

      ಈ ಭಾಗದಲ್ಲಿ ಪ್ರವಾಹದ ಆತಂಕ ಎದುರಾಗಿದ್ದು ಮುನ್ನೆಚ್ಚರಿಕೆಯಾಗಿ ಕಾಳಜಿ ಕೇಂದ್ರಕ್ಕೆ ಎಂಟು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

       ಇನ್ನು, ಮಿತ್ತಬಾಗಿಲು ಗ್ರಾಮದ ಗಣೇಶ್ ನಗರವನ್ನು ಅಪಾಯಕಾರಿ ಪ್ರದೇಶ ಎಂದು ಗುರುತಿಸಿ ಇಲ್ಲಿ ವಾಸವಾಗಿರುವ 32 ಕುಟುಂಬಗಳನ್ನು ಗುರುವಾರ ರಾತ್ರಿಯೇ ಸ್ಥಳಾಂತರಿಸುವ ಮೂಲಕ ತಾಲೂಕು ಆಡಳಿತ ಕ್ರಮ ಕೈಗೊಂಡಿದೆ

      ಜಿಲ್ಲಾಡಳಿತದ ಸೂಚನೆಯಂತೆ ಪುತ್ತೂರು ಸಹಾಯಕ ಕಮಿಷನರ್ ಯತೀಶ್ ಉಳ್ಳಾಲ್, ತಹಶೀಲ್ದಾರ್ ಮಹೇಶ್ ಜೆ. ಅವರು ಗುರುವಾರ ಸ್ಥಳ ಪರಿಶೀಲಿಸಿ ತಕ್ಷಣ ತುರ್ತು ಕ್ರಮ ಕೈಗೊಂಡಿದ್ದಾರೆ.

      ಗಣೇಶ್ ನಗರದ 32 ಕುಟುಂಬಗಳಲ್ಲಿ 149 ಮಂದಿ ಹೆಚ್ಚು ಅಪಾಯಕಾರಿ ಸ್ಥಳದಲ್ಲಿರುವುದಾಗಿ ತಾಲೂಕು ಆಡಳಿತ ಗುರುತಿಸಿತ್ತು.

      ಇದೀಗ ಇವರಲ್ಲಿ ಕೆಲವರಿಗೆ ಮಿತ್ತಬಾಗಿಲು ಗ್ರಾಮದ ಸರಕಾರಿ ಶಾಲೆಯ ಕಾಳಜಿ ಕೇಂದಲ್ಲಿ ಆಶ್ರಯ ನೀಡಲಾಗಿದ್ದರೆ ಇನ್ನುಳಿದ 115 ಮಂದಿಗೆ ಸ್ನೇಹಿತರ ಮನೆಗೆ ಹಾಗೂ ಸಂಬಂಧಿಕರ ಮನೆಯಲ್ಲಿ ಆಶ್ರಯನೀಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap