ಚೇತರಿಸಿಕೊಳ್ಳುತ್ತಿರುವ ಕೇರಳದ ಜನತೆಗೆ ಮತ್ತೆ ಆತಂಕದ ಸುದ್ಧಿ..!?

ತಿರುವನಂತಪುರಂ:

     ಕೇರಳದಲ್ಲಿ ಆಗಸ್ಟ್ ತಿಂಗಳ ಮೊದಲೆರಡು ವಾರ ಸುರಿದ ನಿರಂತರ ಮಳೆಗೆ ರಾಜ್ಯವು ಅಪಾರ ನಷ್ಟವನ್ನು ಅನುಭವಿಸಿದ್ದು, ಈಗ ಮತ್ತೆ ಜಲಕಂಟಕ ಸೃಷ್ಟಿಯಾಗುವ ಆತಂಕ ಎದುರಾಗಿದೆ.

     ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಅಂತೆಯೇ ಕೇರಳದಲ್ಲೂ ಸೆ.25 ಮತ್ತು 26 ರಂದು ಧಾರಾಕಾರ ಮಳೆ ಸುರಿಯಲಿದ್ದು, ರಾಜ್ಯದ ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಯ ಜನರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ.

      ಈ ಕುರಿತು ಸ್ವತಃ ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ್ದು, “ಪಠಾನ್ತಿಟ್ಟ, ಇಡುಕ್ಕಿ, ಪಲಕ್ಕಾಡ್, ತ್ರಿಶೂರ್ ಮತ್ತು ವಯ್ನಾಡ್ ಜಿಲ್ಲೆಗಳಲ್ಲಿ Yellow alert ಘೋಷಣೆ ಮಾಡಲಾಗಿದ್ದು, ಸುಮಾರು 64.4 ರಿಂದ 124.4 ಮಿ.ಮೀ. ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ” ಎಂದಿದ್ದಾರೆ.

     ಆಗಸ್ಟ್ ನಲ್ಲಿ ಸಂಭವಿಸಿದ ಮಳೆಯಿಂದಾಗಿ ಸುಮಾರು 350 ಕ್ಕೂ ಹೆಚ್ಚು ಜನರು ಮೃತರಾಗಿದ್ದು, ಇದುವರೆಗೂ 19512 ನಷ್ಟ ಸಂಭವಿಸಿತ್ತು. ಲಕ್ಷಕ್ಕೂ ಹೆಚ್ಚು ಜನ ನಿರಾಶ್ರಿತರಾಗಿದ್ದು, ದೇಶದಾದ್ಯಂತ ಹರಿದುಬಂದ ದೇಣಿಗೆಯ ನೆರವಿನಿಂದ ಕೇರಳವನ್ನು ಮತ್ತೆ ಕಟ್ಟುವ ಕೆಲಸ ನಡೆಯುತ್ತಿದೆ. ಈಗ ಮತ್ತೆ ಮಳೆಯಾಗುವ ಸೂಚನೆ ಕಾಣುತ್ತಿದ್ದು, ಇದರಿಂದ ಜನತೆ ಮತ್ತೆ ನಷ್ಟಕ್ಕೀಡಾಗುವ ಭೀತಿಯಲ್ಲಿದ್ದಾರೆ. 

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link