ಮಡಿಕೇರಿ:
ಚಾಲಕನ ನಿಯಂತ್ರಣ ತಪ್ಪಿದ ಐರಾವತ ಬಸ್ ಸೇತುವೆಯಿಂದ ಕೆಳಗೆ ಉರುಳಿದ ಘಟನೆ ವಿರಾಜಪೇಟೆ ತಾಲೂಕಿನ ಮಾಪಿಳ್ಳೆತೋಡಿನಲ್ಲಿ ನಡೆದಿದೆ.
ಶುಕ್ರವಾರ ಮುಂಜಾನೆ ಅಪಘಾತಗೊಂಡ ಬಸ್ ಮೈಸೂರಿನಿಂದ ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ಹೊರಟಿತ್ತು. ಬೆಳಗ್ಗಿನ ದಟ್ಟ ಮಂಜಿನ ಕಾರಣ ಚಾಲಕನ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಉರುಳಿದೆ.
ಇನ್ನು ಅಪಘಾತದಲ್ಲಿ ಕೆಲವು ಪ್ರಯಾಣಿಕರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಬೇರೊಂದು ವಾಹನದಲ್ಲಿ ಅವರಿಗೆ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
