ಮಂಗಳೂರು :

ದೇಶದಲ್ಲಿಲಾಕ್‌ಡೌನ್ ತೆರವಿನಿಂದ ಹಂತಹಂತವಾಗಿ ಒಂದೊಂದೇ ಉದ್ಯಮಗಳು ಓಪನ್ ಆಗುತ್ತಿದ್ದು, ಇದೀಗ ಮಂಗಳೂರಿನಿಂದ ನವದೆಹಲಿಗೆ ವಿಮಾನಯಾನ ಆರಂಭವಾಗಿದೆ.
ಇಂದಿನಿಂದ ಮಂಗಳೂರು-ನವದೆಹಲಿ ನೇರ ವಿಮಾನಯಾನ ಸೇವೆ ಆರಂಭವಾಗಲಿದ್ದು, ದೆಹಲಿಯಿಂದ ಬೆಳಗ್ಗೆ 10.10 ಕ್ಕೆ ಟೇಕಾಫ್ ಆಗಲಿರುವ ವಿಮಾನ ಮಧ್ಯಾಹ್ನ 12.35 ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ.
ಮಧ್ಯಾಹ್ನ 1.10 ಕ್ಕೆ ಮಂಗಳೂರಿನಿಂದ ಟೇಕಾಫ್ ಆಗಲಿರುವ ಇದೇ ವಿಮಾನ ಸಂಜೆ 3.55 ಕ್ಕೆ ದೆಹಲಿಯಲ್ಲಿ ಇಳಿಯಲಿದೆ. ಸದ್ಯ ಈ ವಿಮಾನ ಮಂಗಳವಾರ ಮತ್ತು ಭಾನುವಾರ ಮಾತ್ರ ಕಾರ್ಯನಿರ್ವಹಿಸಲಿವೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








