ಮಂಡ್ಯ :
ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅರ್ಚಕ ಹಾಗೂ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡ್ತಿದ್ದ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯ ನಗರದ ಗುತ್ತಲಿನಲ್ಲಿರುವ ಅರ್ಕೇಶ್ವರ ದೇವಾಲಯದಲ್ಲಿ ನಡೆದಿದೆ.
ಗಣೇಶ, ಪ್ರಕಾಶ, ಆನಂದ ಕೊಲೆಯಾದವರು. ಇವರಲ್ಲಿ ಇಬ್ಬರು ಅರ್ಚಕರು, ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಗುರುವಾರ ತಡರಾತ್ರಿ ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ಮೂವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ ಮಾಡಿದ್ದಾರೆ. ನಂತರ ಹುಂಡಿ ಹೊತ್ತೊಯ್ದು ಹಣ ದೋಚಿದ್ದಾರೆ.
ಪಾತಕಿಗಳು ಹುಂಡಿಯನ್ನು ದೇವಾಲಯದ ಹೊರಗೆ ಬಿಸಾಡಿದ್ದಾರೆ. ಹುಂಡಿ ಹಣಕ್ಕಾಗಿ ಈ ಕೊಲೆಗಳು ನಡೆದಿವೆ ಎಂದು ಶಂಕಿಸಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ