ಜೆಡಿಎಸ್‍ನ ರಾಜ್ಯ ಎಸ್‍ಸಿ/ಎಸ್‍ಟಿ ಘಟಕದ ಪ್ರಧಾನ ಕಾರ್ಯದರ್ಶಿ ಕೊಲೆ

ಬೆಂಗಳೂರು

           ಜೆಡಿಎಸ್‍ನ ರಾಜ್ಯ ಪರಿಶಿಷ್ಟ ಜಾತಿ ವರ್ಗ(ಎಸ್‍ಸಿ,ಎಸ್‍ಟಿ) ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಟಿ ರಾಜಗೋಪಾಲ್ ಅವgನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪರಾರಿಯಾಗಿರುವ ನಾಲ್ವರು ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

           ಕನಕಪುರದ ರಾಮನಗರ ರಸ್ತೆಯಲ್ಲಿನ ಜನನಿ ಆಸ್ಪತ್ರೆ ಬಳಿ ಬಳಿ ಸೋಮವಾರ ಸಂಜೆ ಟೀ ಕುಡಿಯುತ್ತಿದ್ದ ವೇಳೆ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ರಾಜಗೋಪಾಲ್ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಇರಿದು, ಕೊಚ್ಚಿ ಕೊಲೆ ಮಾಡಿದ್ದು ಅವರ ಸುಳಿವು ಆಧರಿಸಿ ಕನಕಪುರ ಪೊಲೀಸರು ವಿಶೇಷ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ..

         ರಾಮನಗರ ಜಿಲ್ಲೆಯ ಪಿ.ರಾಂಪುರದ ಮೂಲದ ರಾಜಗೋಪಾಲ್ ಕನಕಪುರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಮಾಡಿಕೊಂಡು ನೆಲೆಸಿದ್ದರು ಹಲವು ಸ್ನೇಹಿತರನ್ನು ಹೊಂದಿದ್ದರು ಜನನಿ ಆಸ್ಪತ್ರೆಯ ಬಳಿ ರಾಜ್‍ಗೋಪಾಲ್ ಅವರು ಟೀ ಕುಡಿಯಲು ಬರುವ ಮುನ್ನ ಕೆಲವರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದ್ದು ಸ್ಥಳಿಯರು ಗಲಾಟೆ ಬಿಡಿಸಿ ಎಲ್ಲರನ್ನೂ ಸಮಾಧಾನ ಪಡಿಸಿ ಕಳುಹಿಸಿದ ನಂತರ ಜನನಿ ಆಸ್ಪತ್ರೆಯ ಬಳಿ ರಾಜ್‍ಗೋಪಾಲ್ ಟೀ ಕುಡಿಯಲು ಆಗಮಿಸಿದ್ದರು. ಈ ವೇಳೆ ರಾಜ್‍ಗೋಪಾಲರನ್ನು ಹಿಂಬಾಲಿಸಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

        ಸುದ್ದಿ ತಿಳಿದ ತಕ್ಷಣ ಕನಕಪುರ ನಗರ ಪೆÇಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ ವಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಈ ಕೊಲೆ ನಡೆದಿರಹುದು ಎಂದು ಶಂಕಿಸಲಾಗಿದ್ದು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap