ಸೂರಲ್ಪಾಡಿ ವಿ ಎಚ್ ಪಿ ಮುಂಖಂಡ ಮೇಲೆ ದಾಳಿ

ಮಂಗಳೂರು:

      ಮಂಗಳೂರಿನಲ್ಲಿ ನಡೆಯುತ್ತಿದ್ದ ಭೂತ ಕೊಲ ನೋಡಲು ಮೊದಲು ಜನ ಭಯ ಭಕ್ತಿಯಿಂದ ಕಾಯುತ್ತಿದ್ದರು ಆದರೆ ಈಗಿನ ಪರಿಸ್ಥಿತಿ ಬದಲಾಯಿಸಿದೆ ಮಂಗಳೂರು ಎಂದರೆ ಸಾಕು ಜನ ಭಯ ಪಡಿಉವ ಹಂತಕ್ಕೆ ಬಂದು ತಲುಪಿದೆ ಯಾಕೆಂದರೆ ಅಲ್ಲಿ ನಡೆಯುವ ಕೋಮುಗಲಭೆ ಹೀಗಿರುವಾಗ ಮಂಗಳೂರು ಮತ್ತೆ ಸುದ್ಧಿಯಲ್ಲಿದೆ ಏಕೆಂದರೆ ಮಂಗಳೂರಿನ ಹಿಂದೂ ಸಂಘಟನೆಯ ಮುಖಂಡನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.

       ಕೈಕಂಬದ ಸೂರಲ್ಪಾಡಿಯಲ್ಲಿ  ಈ ಘಟನೆ ನಡೆದಿದ್ದು .ಹಲ್ಲೆಗೆ ಒಳಗಾದ ವ್ಯಕ್ತಿಯು ವಿಶ್ವಹಿಂದೂ ಪರಿಷತ್  ಮುಖಂಡ , ಪೊಳಲಿ ನಿವಾಸಿ ಹರೀಶ್ ಶೆಟ್ಟಿ (38) ಮೇಲೆ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ . ಘಟನೆಯಲ್ಲಿ ಹರೀಶ್ ಶೆಟ್ಟಿಗೆ ಕೈ ಹಾಗು ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು , ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .  ಹರೀಶ್ ಶೆಟ್ಟಿ ಕೈಕಂಬದಲ್ಲಿ ಖಾಸಗಿ ಬಸ್ ಟೈಂ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

       ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಹರೀಶ್ ಮೇಲೆ 2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.ಅಸ್ವಸ್ತರಾದ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ ಮತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ