ಬೆಂಗಳೂರು
ಪೀಠೋಪಕರಣಗಳ ಅಂಗಡಿಗಳಿಗೆ ಇಂದು ಮುಂಜಾನೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯಗಳ ಪೀಠೋಪಕರಣಗಳು ಸುಟ್ಟು ಹೋಗಿರುವ ದುರ್ಘಟನೆ ಕಾಡುಗೊಂಡನ ಹಳ್ಳಿಯ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂಪುರ ರಸ್ತೆಯ ಬಸವನಗರದಲ್ಲಿ ನಡೆದಿದೆ.ಶಾಂಪುರ ರಸ್ತೆಯ ಬಸವನಗರದಲ್ಲಿನ ವುಡ್ ಫರ್ನಿಚರ್ ಅಂಗಡಿಗೆ ಸೋಮವಾರ ಮುಂಜಾನೆ 3ರ ವೇಳೆ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗುಲಿ ಕೆಲ ಹೊತ್ತಿನಲ್ಲಿ ಇಡೀ ಅಂಗಡಿ ಆವರಿಸಿದೆ. ಬೆಂಕಿ ಹೊಗೆ ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕದಳದ ಮೂರು ವಾಹನಗಳು ಧಾವಿಸಿ ಬೆಳಗ್ಗೆವರೆಗೆ ಶ್ರಮಿಸಿ, ಬೆಂಕಿ ನಂದಿಸಿವೆ.
ಅಂಗಡಿಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿಯಿಂದ ಲಕ್ಷಾಂತರ ಮೌಲ್ಯದ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ. ಅಂಗಡಿಯ ಮಾಲೀಕರಾದ ಅಬ್ದುಲ್ ರಶೀದ್ ಹಾಗೂ ನಹೀಮ್ ದೂರು ನೀಡಿದ್ದು, ಕಾಡುಗೊಂಡನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.
