ಬೆಂಗಳೂರು
ತಂಗಿಯ ಮನೆಗೆ ಬರುತ್ತಿದ್ದ ಅಕ್ಕ ರಸ್ತೆ ದಾಟುವಾಗ ಅಪರಿಚಿತ ವಾಹನ ಹರಿದು ಮೃತಪಟ್ಟಿರುವ ದುರ್ಘಟನೆ ಯಹಲಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಡಿಯನ್ ಏರ್ ಫೋರ್ಸ್ ಬಳಿ ನಡೆದಿದೆ.
ಮೃತಪಟ್ಟವರನ್ನು ರಾಜಾಜಿನಗರದ ಉನ್ನಿ ಮಲೈ (58) ಎಂದು ಗುರುತಿಸಲಾಗಿದೆ. ಯಲಹಂಕದ ಐಎಎಫ್‍ನ ವಸತಿ ಗೃಹದಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದ ತಂಗಿಯ ಮನೆಗೆ ಭಾನುವಾರ ರಾತ್ರಿ 10 ರ ವೇಳೆ ಉನ್ನಿ ಮಲೈ ಬರುತ್ತಿದ್ದರು.
ಇಂಡಿಯನ್ ಏರ್‍ಪೆ ಫೋರ್ಸ್ ಬಳಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ವೇಗವಾದ ಬಂದ ಅಪರಿಚಿತ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಹಲಂಕ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ.








