ಇಸ್ಲಾಮಾಬಾದ್ :
ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಕಾಶ್ಮೀರ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಎಂದು ಹೇಳಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತದ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು, ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಆಹ್ವಾನಿಸದೆ. ಏಷ್ಯಾ ಉಪಖಂಡಗಳು ಮತ್ತು ಬ್ರಿಕ್ಸ್ನಲ್ಲಿರುವ ಪ್ರಮುಖ ರಾಷ್ಟ್ರಗಳನ್ನು ಆಹ್ವಾನಿಸಿದ್ದರು. ಇದು ಒಂದು ರೀತಿ ಜಾಗತೀಕವಾಗಿ ಪಾಕಿಸ್ತಾನವನ್ನು ಭಾರತ ಮೂಲೆಗುಂಪು ಮಾಡುವ ಕಾರ್ಯತಂತ್ರ ಎಂದೇ ಹೇಳಲಾಗಿತ್ತು. ಇದಕ್ಕೆ ಬೆದರಿರುವ ಪಾಕಿಸ್ತಾನ ಇದೀಗ ಪುನಃ ಭಾರತದ ಮುಂದೆ ಎರಡನೇ ಬಾರಿಗೆ ಮಾತುಕತೆಗೆ ದುಂಬಾಲು ಬಿದ್ದಿದೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಭಾರತದ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ಗೆ ಪತ್ರ ಬರೆದು ಉಭಯ ದೇಶಗಳ ಮಾತುಕತೆಯ ಕುರಿತಾಗಿ ಕೇಳಿಕೊಂಡಿದ್ದರು. ಇದಾದ ನಂತರ ಪಾಕ್ ಪ್ರಧಾನಿ ಇಂತಹುದೇ ಪತ್ರವನ್ನು ಪ್ರಧಾನಿ ಮೋದಿಗೆ ರವಾನಿಸಿದ್ದಾರೆ.
ಎರಡನೇ ಅವಧಿಗೆ ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ ಅವರನ್ನು ಅಭಿನಂದಿಸಿರುವ ಇಮ್ರಾನ್ ಖಾನ್, ಭಾರತ ಮತ್ತು ಪಾಕ್ ನಡುವೆ ಇರುವ ಕಾಶ್ಮೀರ ಸೇರಿ ಎಲ್ಲ ವಿವಾದಗಳನ್ನು ಪರಿಹರಿಸಿಕೊಳ್ಳಲು ಪಾಕ್ ಉತ್ಸುಕವಾಗಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನವು ದಕ್ಷಿಣಾ ಏಷ್ಯಾ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮೂಡುವಂತೆ ಮಾಡಲು ಬದ್ಧವಾಗಿದೆ. ಆದ್ದರಿಂದ ಈ ವಿಷಯವನ್ನು ಉಭಯ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈ ಮೂಲಕ ಹಲವು ದಿನಗಳಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಎದ್ದಿರುವ ವೈಮನಸ್ಯಕ್ಕೆ ತೆರೆ ಎಳೆಯಲು ಪಾಕ ಪ್ರಧಾನಿ ಇಮ್ರಾನ್ ಖಾನ್ ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ