ಮಂಡ್ಯ:
ಅಂಬಿ ಸಾವಿಗೆ ಬಾರದ ಮಂಡ್ಯದ ಮಾಜಿ ಸಂಸದೆ ರಮ್ಯಾ ನೆನ್ನೆ ರಾತ್ರಿ ಸುಮಾರು 10 ಗಂಟೆಗೆ ಹೇಳದೆ ಕೇಳದೇ ಅವರ ತಾತ್ಕಾಲಿಕ ಮನೆಯನ್ನು ಖಾಲಿ ಮಾಡಿದ್ದಾರೆ ಮಂಡ್ಯದ ಜನರ ಆಕ್ರೋಶಕ್ಕೆ ಒಳಗಾಗಿದ್ದ ಅವರು ಕುಂಟು ನೆಪವೊಡ್ಡಿ ಅಂತ್ಯ ಕ್ರಿಯೆಗೆ ಹಾಜರಾಗಿರಲ್ಲಿಲ್ಲ ಜೊತೆಗೆ ಒಂದು ಕಡೆ ಹೇಳುವಂತೆ ರಮ್ಯಾ ಮಂಡ್ಯ ರಾಜಕೀಯದಿಂದ ದೂರ ಉಳಿಯುವ ಸಾಧ್ಯತೆಗಳು ತೀರಾ ಹೆಚ್ಚಾಗಿದೆ ಎಂದು ರಾಜಕೀಯ ವಿಷ್ಲೇಶಕರು ತಿಳಿಸಿದ್ದಾರೆ ಇದರಿಂದಾಗಿ ಮಂಡ್ಯದ ಜನ ರಮ್ಯ ಅಂಬಿ ಅಭಿಮಾನಿಗಳಿಗೆ ಹೆದರಿ ರಾತ್ರೋರಾತ್ರಿ ಊರು ಬಿಟ್ಟಿದ್ದಾರೆ ಎಂದು ಹೇಳ ತೊಡಗಿದ್ದಾರೆ.
ರಮ್ಯಾ ಅವರ ಮನೆ ಮಂಡ್ಯ ನಗರದ ವಿದ್ಯಾನಗರದಲ್ಲಿದ್ದು, ಭಾನುವಾರ ತಡರಾತ್ರಿ ಎರಡು ಲಾರಿಗಳಲ್ಲಿ ಮನೆಯಲ್ಲಿದ್ದ ವಸ್ತುಗಳನ್ನು ಸಾಗಣೆ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.