ಬೆಂಗಳೂರು :
ಮುಖ್ಯಮಂತ್ರಿಯನ್ನು ಭೇಟಿಯ ಅಗಲೂ ಬರುವ ಸಾರ್ವಜನಿಕರಿಗೆ ಇನ್ಮುಂದೆ ಕೋವಿಡ್-19 ಪರೀಕ್ಷೆ ಕಡ್ಡಾಯವಾಗಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಲು ರಾಜ್ಯದ ನಾನಾ ಭಾಗಗಳಿಂದ ಸಾರ್ವಜನಿಕರು ಆಗಮಿಸ್ತಾರೆ. ತಮ್ಮ ಕಷ್ಟಗಳನ್ನ ಸಿಎಂ ಮುಂದಿಟ್ಟು, ಪರಿಹಾರಕ್ಕಾಗಿ ಮೊರೆಯಿಡ್ತಾರೆ.
ಇದರಲ್ಲಿ ಯಾರಿಗೆ ಸೋಂಕಿದೆ ಇಲ್ಲವೋ ಎಂಬುದು ತಿಳಿದಿರುವುದಿಲ್ಲ. ಈ ಹಿನ್ನಲೆ ಗೃಹ ಕಚೇರಿಗೆ ಆಗಮಿಸುವವರಿಗೆ ಅಂಟಿಜನ್ ಪರೀಕ್ಷೆ ಕಡ್ಡಾಯವಾಗಿ ಒಳಗಾಗಬೇಕು. ಪರೀಕ್ಷೆ ಮಾಡದೇ ಯಾರು ಕೂಡ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅದರಲ್ಲಿಯೂ ವರದಿ ನೆಗೆಟಿವ್ ಬಂದವರಿಗೆ ಮಾತ್ರ ಸಿಎಂ ಗೃಹ ಕಚೇರಿ ಕೃಷ್ಣಗೆ ಪ್ರವೇಶ ಸಾಧ್ಯ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
ಕಳೆದ ಆಗಸ್ಟ್ನಲ್ಲಿ ಸಿಎಂ ಯಡಿಯೂರಪ್ಪ ಅವರು ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ