ರಾಜ್ಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್ ಶಿಪ್ ಗೆ ತೆರೆ

 ತುಮಕೂರು:

‌     ನಗರದ ಶ್ರೀ ದೇವಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಮಹಿಳಾ ಚೆಸ್ ಚಾಂಪಿಯನ್ ಶಿಪ್ಗೆ ಭಾನುವಾರ ಸಂಜೆ ವಿದ್ಯುಕ್ತ ತೆರೆಬಿದ್ದಿತು. ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್, ನ್ಯೂ ತುಮಕೂರು ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ ನೇತೃತ್ವದಲ್ಲಿ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧೆಡೆಯ ಎಂಟು ವರ್ಷದಿಂದ ಆರವತ್ತು ವರ್ಷದವರೆಗಿನ ನೂರಕ್ಕೂ ಅಧಿಕ ಮಹಿಳಾ ಚೆಸ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದರು.

    ರಾಜ್ಯ ಮಟ್ಟದ ಈ ಚಾಂಪಿಯನ್ ಶಿಪ್ ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆದ ಬೆಂಗಳೂರಿನ ಮಾನಸ, ಕೃಪಾ ಎಸ್ ಉಕ್ಕಾಲಿ, ಶ್ರೇಯಾ ರಾಜೇಶ್ ಹಾಗೂ ದಕ್ಷಿಣ ಕನ್ನಡದ ಅರುಷಿ ಡಿಸೆಲ್ವ ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಯಾದರು. ಸಮಾರೋಪ ಭಾಷಣ ಮಾಡಿದ ರೆಡ್ ಕ್ರಾಸ್ ರಾಷ್ಟ್ರೀಯ ಮಂಡಳಿ ಸದಸ್ಯ ರು ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ ಅವರು ಭಾರತ ಇಂದು ಹಲವು ಕ್ಷೇತ್ರದಲ್ಲಿ ಮುಂಚೂಣಿ ಯಲ್ಲಿ ದೆ. ಅದೇ ರೀತಿ ಚೆಸ್ ನಲ್ಲೂ ಭಾರತ ವಿಶ್ವ ಪ್ರಸಿದ್ಧಿ ಪಡೆದಿದ್ದು, ನಗರ ಪ್ರದೇಶಕ್ಕೆ ಸೀಮಿತವಾಗಿ ರುವ ಈ ಕ್ರೀಡೆಯನ್ನು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದರು.

    ಮಕ್ಕಳಿಗೆ ಚೆಸ್ ಕಲಿಕೆ ಯಲ್ಲಿ ತಾಯಂದಿರ ಪಾತ್ರ ಮಹತ್ತರವಾದುದು. ಚೆಸ್ ನಿರಂತರ ಅಭ್ಯಾಸ ದಿಂದ ಮಕ್ಕಳ ಲ್ಲಿ ಏಕಾಗ್ರತೆ ಜೊತೆ ಗೆ ಗ್ರಹಿಕೆ ಸಾಮಾರ್ಥ್ಯ ವೂ ಹೆಚ್ಚಿಸಿಕೊಳ್ಳಬಹುದು ಎಂದರು. ಬಟವಾಡಿ ಸೆಂಟ್ ಮೇರಿಸ್ ಶಾಲೆ ಮುಖ್ಯಸ್ಥರಾದ ಸಿಸ್ಟರ್ ಫೆರಿಕಾ ಅವರು ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿ, ಚದುರಂಗದಾಟವೆಂದು ಕರೆಯಲ್ಪಡುವ ಚೆಸ್ ಭಾರತೀಯ ಆಟವಾಗಿದೆ. ಮಹಾಭಾರತ ಗತಿಸಲು ಈ ಚದುರಂಗದಾಟವೇ ಕಾರಣ.

    ಚೆಸ್ ಬರೀ ಆಟವಲ್ಲ. Cars ಬದುಕಿನ ಸವಾಲುಗಳನ್ನು ಹೇಗೆ ಚಾಕಚಕ್ಯತೆ ಯಿಂದ ಗೆಲ್ಲಬೇಕು ಎಂದು ಅರಿವು ಮೂಡಿಸುವ ಕ್ರಿಯೆ ಎಂದು ಬಣ್ಣಿಸಿದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ. ನಿ. ಪುರುಷೋತ್ತಮ್ ಮಾತನಾಡಿ, ತುಮಕೂರು ಜಿಲ್ಲೆ ಕಲೆ ಸಾಹಿತ್ಯ ಸಂಸ್ಕೃತಿ ಗೆ ಹೆಸರಾಗಿರುವಂತೆ ಕ್ರೀಡೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ರಾಜ್ಯ, ತುಮಕೂರು ಜಿಲ್ಲಾ ಚೆಸ್ ಅಸೋಸಿಯೇಷನ್ ಮಧುಕರ್, ಮಾಧುರಿ, ಅಖಿಲಾನಂದ್ ಅವರ ತಂಡ ರಾಜ್ಯ ರಾಷ್ಟ್ರ ಮಟ್ಟದ ಹಲವು ಪಂದ್ಯಾವಳಿಗಳನ್ನು ತುಮಕೂರಲ್ಲಿ ಯಶಸ್ವಿಯಾಗಿ ಸಂಘಟಿಸಿ ಚೆಸ್ ಕ್ರೀಡೆ ಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಜಿಲ್ಲೆ ಯ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆ ಗಳಿಗೆ ಶ್ರೀ ದೇವಿ ಕಾಲೇಜು ಸಂಸ್ಥಾಪಕ ಡಾ. ಹುಲಿನಾಯ್ಕರ್ ಅವರು ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನೀಯ ಎಂದರು.

    ರಾಮನಗರದ ಮಾತೃಭೂಮಿ ಸಂಸ್ಥೆಯ ಬಾಲಸುಬ್ರಹ್ಮಣ್ಯಂ ಅವರು ಚೆಸ್ ಆಟಗಾರರು ಪರಿಸರ ಸಂರಕ್ಷಣೆ ಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು. ಚೆಸ್ ಅಸೋಸಿಯೇಷನ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಧ್ಯಕ್ಷ ಟಿ. ಎನ್. ಮಧುಕರ್, ತತ್ವ ಫೌಂಡೇಶನ್ ಮುಖ್ಯ ಸ್ಥ ಉಮೇಶ್, ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಅಖಿಲಾನಂದ್, ಅಂತಾರಾಷ್ಟ್ರೀಯ ಚೆಸ್ ಕೋಚ್ಗಳಾದ ಮಾಧುರಿ, ಮಂಜುನಾಥ್ ಜೈನ್ ಮಹಿಳಾ ಚಾಂಪಿಯನ್ ಶಿಪ್ ನ ವಿವಿಧ ವಿಭಾಗಗಳಲ್ಲಿ ಗೆಲವು ಸಾಧಿಸಿದ ಮಹಿಳಾ ಚೆಸ್ ಆಟಗಾರ್ತಿಯರಿಗೆ ನಗದು ಬಹುಮಾನ, ಪಾರಿತೋಷಕವನ್ನು ವಿತರಿಸಿದರು.

   ಮುಂದಿನ ವರ್ಷ ದಿಂದ ಮಹಿಳಾ ಚೆಸ್ ಪಂದ್ಯಾವಳಿಯ ಮೊತ್ತವನ್ನು ಎರಡು ಲಕ್ಷಕ್ಕೆ ಏರಿಸುವುದಾಗಿ ಪ್ರಕಟಿಸಿದರು. ತುಮಕೂರಿನಲ್ಲಿ ಯಾವಾಗ ಪಂದ್ಯಾವಳಿ ನಡೆದರೂ ಉತ್ತಮ ವ್ಯವಸ್ಥೆ ಮಾಡಿರುತ್ತಾರೆ. ಇಲ್ಲಿ ಗೆ ಬರಲು ಖುಷಿಯಾಗುತ್ತದೆ ಎಂದು ರಾಜ್ಯ ದ ವಿವಿಧೆಡೆ ಯಿಂದ ಆಗಮಿಸಿದ್ದ ಸ್ಪರ್ಧಾಳುಗಳು ಸಂತಸ ಹಂಚಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap