ಕೋಲಾರ :
ಪಾದಪೂಜೆ ಮಾಡುತ್ತಿದ್ದ ಯುವತಿಯೊಂದಿಗೆ ನಾಪತ್ತೆಯಾಗಿದ್ದ ಕೋಲಾರದ ಹೊಳಲಿ ಭೀಮಲಿಂಗೇಶ್ವರ ಸೇವಾಶ್ರಮದ ಪೀಠಾಧಿಪತಿ ದತ್ತಾತ್ರೇಯ ಅವಧೂತ ಸ್ವಾಮೀಜಿ (40) ಪತ್ತೆಯಾಗಿದ್ದಾರೆ.
ಫೆ.27ರಂದು ಕೋಲಾರ ತಾಲ್ಲೂಕು ಹೊಳಲಿ ಗ ಗ್ರಾಮದ 20 ವರ್ಷದ ಯುವತಿಯೊಂದಿಗೆ ಸ್ವಾಮೀಜಿ ನಾಪತ್ತೆಯಾಗಿದ್ದು ಕೋಲಾರ ಗ್ರಾಮಾಂತರ ಠಾಣೆಗೆ ಯುವತಿಯ ಸೋದರ ಮಾವ ಶಂಕರ್ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ಯುವತಿಯ ಸಹೋದರನಿಗೆ ಫೋನ್ ಮಾಡಿದ ಸ್ವಾಮೀಜಿ ನಿಮ್ಮ ಹುಡುಗಿಯನ್ನು ತಿರುಪತಿಯಲ್ಲಿ ಮದುವೆಯಾಗಿದ್ದೇನೆ. ಮನೆಗೆ ಬಂದು ಮಾತನಾಡುತ್ತೇನೆ. ಪೋಲಿಸರಿಗೆ ದೂರು ಕೊಡಬೇಡಿ ಎಂದು ಕೇಳಿಕೊಂಡಿದ್ದನು.
ಆನಂತರ ಅವರ ಸುಳಿವು ಸಿಕ್ಕಿರಲಿಲ್ಲ. ಪರಾರಿ ಆಗಿರುವ ಇವರನ್ನು ಹುಡುಕಿ ತರಲು ತಂಡ ರಚಿಸಲಾಗಿತ್ತು. ಇದೀಗ ಸ್ವಾಮೀಜಿ ಮಂಗಳೂರು ಬಳಿ ಯುವತಿಯೊಂದಿಗೆ ಸಿಕ್ಕಿಬಿದ್ದಿರುವುದಾಗಿ ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
