ಮಾಜಿ ಡಿಸಿಎಂ ಜಿ.ಪರಮೇಶ್ವರ ತುಮಕೂರಿನಲ್ಲಿ ಹೇಳಿಕೆ

ತುಮಕೂರು:

ಮಾಜಿ ಡಿಸಿಎಂ ಜಿ.ಪರಮೇಶ್ವರ ತುಮಕೂರಿನಲ್ಲಿ ಹೇಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ, ನಿರಾಸೆಯಾಗಿದೆಅದರ ಕಾರಣ ಕೂಡ ನಾವು ಹುಡುಕಬೇಕಾಗಿದೆದೇಶದಲ್ಲಿ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗುತ್ತಿದೆ ಎಂಬ ವಾತಾವರಣ ಇದೆಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿದೆ

ಇಂಥ ಸಂದರ್ಭದಲ್ಲೂ ಜನರು ಬಿಜೆಪಿಗೆ ಮತ ಹಾಕುತ್ತಾರೆ ಎಂದರೇ ಏನೋ ಕಾರಣ ಇರಬಹುದುಅಥವಾ ಕಾಂಗ್ರೆಸ್ ಚುನಾವಣೆ ಮಾಡುವ ರೀತಿಯೇ ಸರಿ ಇಲ್ಲವೋ ಏನೋ ಗೊತ್ತಾಗುತ್ತಿಲ್ಲಸೋಲಿಗೆ ನಾವು ಕಾರಣ ಹುಡುಕಬೇಕಾಗಿದೆಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್ ಪಿ ಗಿಂತ ಹೆಚ್ಚು ರ್ಯಾಲಿ ಮಾಡಿದ್ರು.. ಜನರನ್ನು ತಲುಪುವ ಪ್ರಯತ್ನ ಮಾಡಿದ್ರು

ಆದರೂ ಮತ ಬೇರೆಯವರಿಗೆ ಹೋಗಿದೆಇದನ್ನು ನಾವು ಆಂತರಿಕವಾಗಿ ವಿಶ್ಲೇಷಣೆ ಮಾಡಬೇಕು2024 ರ ಲೋಕಸಭಾ ಚುನಾವಣೆ ಟರ್ನಿಂಗ್ ಪಾಯಿಂಟ್ ಈ ದೇಶದ ಅಭಿವೃದ್ಧಿ, ಬೆಳವಣಿಗೆ ಕಾರಣದಿಂದ 2024 ರ ಚುನಾವಣೆ ಬಹಳ ಮುಖ್ಯಅಷ್ಟರ ಒಳಗೆ ನಾವು ನಮ್ಮ ಮನೆಯನ್ನು ಸರಿಪಡಿಸಿಕೊಳ್ಳಬೇಕುನಮ್ಮ ತಪ್ಪಗಳನ್ನು ತಿದ್ದಿಕೊಳ್ಳಬೇಕು ಸ್ಥಳೀಯವಾಗಿ ಲೀಡರ್ ಶಿಪ್ ಸರಿಪಡಿಸಿಕೊಳ್ಳಬೇಕು

ಇವಿಎಂ ನ್ನು ಮ್ಯಾನುಪ್ಲೆಟ್ ಮಾಡುವ ಟೆಕ್ನಾಲಾಜಿ ಅವರು ಇಟ್ಟಕೊಂಡಿದ್ದಾರೆ ಬೇರೆ ಬೇರೆ ದೇಶದಿಂದ ಅದನ್ನು ಆಪರೇಟ್ ಮಾಡುತ್ತಾರೆ ಎಂದು ಕೇಳಿದ್ದೇವೆ ನನಗೂ ಕೂಡ ಅನೇಕಬಾರಿ ಆ ರೀತಿ ಅನಿಸಿದೆತಂತ್ರಜ್ಞರು ಹೇಳಿಕೆ ನೋಡಿದರೆ ಇವಿಎಂ ಹ್ಯಾಕ್ ಆಗಿರಬಹದು ಅನಿಸುತ್ತದೆಆದರೆ ನಾವು ಅದನ್ನು ಕೇವಲ ಆರೋಪ ಅಷ್ಟೇ ಮಾಡಬಹುದು ಸ್ಪಷ್ಟವಾಗಿ ನಮಗೂ ಗೊತ್ತಿಲ್ಲಉತ್ತರ ಪ್ರದೇಶದಲ್ಲೂ ಹ್ಯಾಕ್ ಆಗಿರಬಹುದು ಯಾಕೆ ಆಗಬಾರದುಉತ್ತರ ಪ್ರದೇಶ 80 ಲೋಕಸಭಾ ಸದಸ್ಯರಿರುವ ರಾಜ್ಯ

ಹಾಗಾಗಿ ಆ ರಾಜ್ಯದಲ್ಲಿ ಆಡಳಿತಕ್ಕೆ ಬಂದರೆ ಸಂಸತ್ ಚುನಾವಣೆ ಸುಲಭವಾಗುತ್ತದೆ ಎನ್ನುತ್ತಾರೆ
ಹಾಗಾಗಿ ಅಲ್ಲಿ ಕೂಡ ಯಾಕೆ ಹ್ಯಾಕ್ ಮಾಡಿರಬಾರದು ಎಂಬ ಪ್ರಶ್ನೆನೂ ಬರುತ್ತದೆ ಬ್ಯಾಲೇಟ್ ಪೇಪರ್ ಮತ್ತೆ ತರಬೇಕು ಎಂದು ಒತ್ತಾಯ ಮಾಡುತ್ತೇನೆ ಡಿಕೆ ಶಿವಕುಮಾರ್ ಗೆ ಫ್ರೀ ಹ್ಯಾಂಡ್ ಸಿಕ್ತಿಲ್ಲ ಎಂಬ ವಿಚಾರ ಡಿಕೆ ಶಿವಕುಮಾರ್ ಸ್ವತಂತ್ರವಾಗಿದ್ದಾರೆ ಅವರಿಗೆ ಯಾವುದೇ ಕಂಟ್ರೋಲ್ ಇಲ್ಲ ಅವರು ಒಳ್ಳೆ ಕೆಲಸ ಮಾಡುತಿದ್ದಾರೆ ಪ್ರಮುಖ‌ ನಿರ್ಧಾರವನ್ನು ಎಲ್ಲರ ಜೊತೆ ಚರ್ಚೆ ಮಾಡಿ ಮಾಡುತ್ತಾರೆ

ಮೇಕೆದಾಟು ಪಾದಯಾತ್ರೆ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡಿದ್ದಾರೆ ಕಾಂಗ್ರೆಸ್ ಸಿಎಂ ಅಭ್ಯರ್ಥಿ ವಿಚಾರ ಅಪ್ರಸ್ತುತ ಎಲ್ಲರೂ ಮೊದಲು ಪಕ್ಷ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link