ರಾಜ್ಯ ಮಟ್ಟದ ಭಜನೆ ಸ್ಪರ್ಧೆ

ಚಿತ್ರದುರ್ಗ:


ಆಧ್ಯಾತ್ಮದ ಮಜಲುಗಳಾಗಿ ಪ್ರಾರ್ಥನೆ, ಭಜನೆ ಇವು ಸಮೂಹ ಕಲೆಗಳು. ಈ ಕಲೆಗಳು ಪ್ರತಿಭಾವಂತ ಕಲೆಗಳಾಗಿದ್ದು, ಇದರಲ್ಲಿ ಏಕ ವ್ಯಕ್ತಿ ಭಜನೆಯನ್ನು ಸಹ ಕಾಣಬಹುದು. ಕಬೀರಾನಂದ, ಮೀರಾಬಾಯಿ ಮುಂತಾದ ಸಂತರು ಏಕಾಂತದಲ್ಲಿ ಭಜನೆ ಮಾಡುತ್ತಿದ್ದರು. ಸಂತ ಶರಣರಿಗೆ ಲೋಕಾಂತ, ಏಕಾಂತ ಸಿದ್ದಿಸಬೇಕು. ಅದರಲ್ಲಿ ಬಸವತ್ವವಿರುತ್ತದೆ.

ಭಜನೆಯೆಂದರೆ, ಆಧ್ಯಾತ್ಮದ ಜೀವಾಳ, ಮುರುಘಾ ಪರಂಪರೆಯಲ್ಲಿ ಸುಮಾರು ಹತ್ತುಜನ ಪರಮಶಿವಯೋಗಿಗಳಿದ್ದರು, ಅದರಲ್ಲಿ ಬಾಲಲೀಲ ಶಿವಯೋಗಿ ಸ್ವಾಮೀಜಿ, ಸರ್ಪಭೂಷಣ ಸ್ವಾಮೀಜಿ, ಜಯವಿಭವ ಸ್ವಾಮೀಜಿಗಳು. ಜಯವಿಭವ ಸ್ವಾಮಿಜಿಗಳು ಬಾಲಲೀಲ ಶಿವಯೋಗಿಗಳ ತತ್ವಪದಗಳನ್ನು ಹಾಡಿ ಅನುಭವಿಸುತ್ತಿದ್ದರು. ತತ್ವ ಪದವೂ ಆಧ್ಯಾತ್ಮ ಬದುಕಿಗೆ ದಾರಿಯನ್ನು ತೋರಿಸುತ್ತದೆ. ಇದರಿಂದ ಪರಮಾನಂದ ಪಡೆಯಲು ಸಾಧ್ಯ. ವ್ಯಕ್ತಿ ಮತ್ತು ಸಾಮಾಜಿಕ ಜೀವನದಲ್ಲಿ ಉತ್ತಮ ಮಾರ್ಗ ತೋರಿಸಲು ಸಹಾಯಕ ಎಂದು ರಾಜ್ಯಮಟ್ಟದ ಭಜನೆ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಮಪೂಜ್ಯ ಡಾ.ಶಿವಮೂರ್ತಿ ಮುರುಘಾ ಶರಣರು ಹಿತವಚನ ನುಡಿದರು.

ಕಾರ್ಯಕ್ರಮದ ಸಮ್ಮಖವಹಿಸಿದ್ದ ಚಿಗರಹಳ್ಳಿ ಶ್ರೀಮರುಳಶಂಕರದೇವರ ಗುರುಪೀಠದ ಶ್ರೀಸಿದ್ದಬಸವ ಕಬೀರಸ್ವಾಮಿಗಳು ಆಶೀರ್ವಚನ ಮಾಡುತ್ತಾ, ಬಯಸಿ ಬಂದ್ದಿದು ಅಂಗಬೋಗ, ಬಯಸದೆ ಬಂದ್ದಿದ್ದು ಲಿಂಗ ಭೋಗ ಎಂಬುದು ನನಗೆ ಇಂದು ಅನ್ವಯಿಸುತ್ತದೆ. ಏಕೆಂದರೆ ಕಡಕೋಳ ಮಡಿವಾಳಪ್ಪನವರ ಭಜಾನ ಕೇಂದ್ರ ಹೆಸರು ಮಾಡಿದೆ ಮತ್ತು ಅವರು ನಮ್ಮ ಸ್ವಗ್ರಾಮದವರಾಗಿರುವರಿಂದ, ನಾನು ಸಹ ಭಜನಾ ಪ್ರಿಯಾನಾಗಿರುವುದರಿಂದ ಇಂತಹ ಕಾರ್ಯಕ್ರಮದಲ್ಲಿ ಸಮ್ಮುಖವಹಿಸಿದವುದು ಹೆಮ್ಮೆಯ ವಿಚಾರ. ಇಂದು ಭಜನೆ ಮಾಡುವವರ ಸಂಖ್ಯೆ ಕಡಿಮೆಯಾಗುತಿದೆ. ಭಜನೆಯಿಂದ ಶಾಂತಿ ಸಾಧ್ಯ ಮತ್ತು ಮನಸ್ಸು ಸ್ವಚ್ಚ ಮಾಡಿಕೊಳ್ಳಲು ಸಹಯ, ಡಾ. ಡಾ.ಶಿವಮೂರ್ತಿ ಮುರುಘಾ ಶರಣರು, ಶರಣ ಸಂಸ್ಕøತಿ ಉತ್ಸವದ ಮೂಲಕ ಇಂತಹ ಸಂಸ್ಕøತಿಯನ್ನು ಉಳಿಸಿ ಪ್ರೋತ್ಸಾಹಿಸಲು ಶ್ರಮಿಸುತ್ತಿದ್ದಾರೆ.

ಕಾರ್ಯಕ್ರಮವನ್ನು ಚಿತ್ರದುರ್ಗದ ಅಸಿಸ್ಟೆಂಟ್ ಕಮಿಷನರ್ ಶ್ರೀ ಚಂದ್ರಯ್ಯ ನವರು ಭಜನೆ ಮೂಲಕ ಉದ್ಘಾಟನೆ ಮಾಡಿದರು, ಶ್ರೀಮಠವು ಜಿಲ್ಲೆಯ ಕೇಂದ್ರ ಬಿಂದು, ಮಠದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತದೆ. ಧನುರ್ ಭಜನೆಯೂ ದೇವರನ್ನು ಸ್ಮರಿಸುವ ಕಲೆಯಾಗಿ ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಮಾಡುತ್ತಿದ್ದರು. ಇಂದು ಸ್ಪರ್ಧೆಯಲ್ಲಿ ಭಾಗವಹಿಸುವ ತಂಡಗಳಿಗೆ ಭಜನಾ ಕಲೆಯನ್ನು ಪೋಷಿಸಿ, ಬೆಳಸಬೇಕು ಎಂದು ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಭಜನಾ ಸ್ಪರ್ಧ ಕಾಯಕ್ರಮದಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ 17 ತಂಡಗಳು ಭಾಗವಹಿಸಿದ್ದವು. ಜನ ಕಲಾ ಮತ್ತು ಭಜನಾ ಮಂಡಳಿ, ಕುಗ್ವೆ, ಸಾಗರ ತಾ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಬೆಳವಾಡಿ, ಚಿಕ್ಕಮಗಳೂರು ಜಿ. ಶ್ರೀ ಚಂಡಿಕೇಶ್ವರಿ ಭಜನಾ ಮಂಡಳಿ, ನಾರ್ವೆ, ಚಿಕ್ಕಮಗಳೂರು ಜಿ. ಶ್ರೀ ಕಲ್ಲೇಶ್ವರ ಭಜನಾ ಸಂಘ, ಹೆಡಿಗೊಂಡ, ಹಾವೇರಿ ಜಿ, ಶ್ರೀ ಮಾರುತೇಶ್ವರ ಭಜನಾ ಸಂಘ, ತೋಪಲಗಟ್ಟಿ, ಕೊಪ್ಪಳ ಜಿ. ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ತೋಗರಿ, ಹೊಸನಗರ ತಾ. ಶ್ರೀ ವೀರಾಂಜನೇಯ ಸ್ವಾಮಿ ಭಜನಾ ಮಂಡಳಿ, ಅಜ್ಜಂಪುರು, ಚಿಕ್ಕಮಗಳೂರು ಜಿ, ಶ್ರೀ ವರಮಾರುತಿ ಭಜನಾ ಸಂಘ, ಹ್ಯಾರಾಡಾ, ಹೂವಿನಹಡಗಲಿ ತಾ, ಶ್ರೀ ಕಾಲಭೈರವೇಶ್ವರ ಭಜನಾ ಮಂಡಳಿ, ರಾಮಜ್ಜನಹಳ್ಳಿ, ಹೊಸದುರ್ಗ ತಾ, ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ಭಜನಾ ಸಂಘ, ಕೆ.ಬಳ್ಳಾಕಟ್ಟೆ, ಚಿತ್ರದುರ್ಗ ತಾ, ಶ್ರೀ ಆಂಜನೇಯ ಭಜನಾ ಸಂಘ, ಸಿ ಎನ್ ಮಾಳಿಗೆ, ಹಿರಿಯೂರು ತಾ, ಶ್ರೀ ರಂಗನಾಥ ಸ್ವಾಮಿ ಭಜನಾ ಮಂಡಳಿ, ಶ್ರೀ ರೇವಣಸಿದ್ದೇಶ್ವರ ಭಜನಾ ಸಂಘ, ಬುರುಜನಹಟ್ಟಿ, ಚಿತ್ರದುರ್ಗ ತಾ, ಶ್ರೀ ಕರಿಬಸವೇಶ್ವರ ಭಜನಾ ಸಂಘ, ಮಠದಕುರುಬರಹಟ್ಟಿ, ಚಿತ್ರದುರ್ಗ ತಾ, ಶ್ರೀ ಮಾರುತಿ ಕಲಾ ತಂಡಾ, ಚಿತ್ರದುರ್ಗ ತಾ, ಕನಕ ಭಜನಾ ಸಂಘ, ಅಸಗೋಡು, ಜಗಳೂರು ತಾ, ಶ್ರೀ ಬಸವೇಶ್ವರ ಭಜನಾ ಕಲಾ ತಂಡ, ಜೋಯಿಸರ ಹರಳಹಳ್ಳಿ, ರಾಣಿಬೆನ್ನೂರು ತಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಸ್ಪರ್ಧೆಯಲ್ಲಿ ಶ್ರೀ ಚನ್ನೆಗೌಡ ಮತ್ತು ಸಂಗಡಿಗರು, ಶ್ರೀ ಬಸವೇಶ್ವರ ಭಜನಾ ಕಲಾ ತಂಡ, ಜೋಯಿಸರ ಹರಳಹಳ್ಳಿ, ರಾಣಿಬೆನ್ನೂರು ತಾ, ಹಾವೇರಿ ಜಿಲ್ಲೆ ಪ್ರಥಮ ಸ್ಥಾನಗಳಿಸಿದರೆ, ಶ್ರೀಮತಿ ಪುಣ್ಯವತಿ ಮತ್ತು ಸಂಗಡಿಗರು, ಶ್ರೀ ವೀರಾಂಜನೇಯಸ್ವಾಮಿ ಭಜನಾ ಮಂಡಳಿ, ಅಜ್ಜಂಪುರ, ಚಿಕ್ಕಮಗಳೂರು ಜಿ ದ್ವೀತಿಯ ಸ್ಥಾನಗಳಿಸಿದರೆ, ಚಮನ್ಸಾಬ್ ಮತ್ತು ಸಂಗಡಿಗರು, ಶ್ರೀ ವರಮಾರುತಿ ಭಜನಾ ಸಂಗ, ಹ್ಯಾರಿಡಾ, ಹೂವಿನಹಡಗಳಿ ತಾ, ವಿಜಯನಗರ ಜಿಲ್ಲೆ ತೃತಿಯ ಸ್ಥಾನಗಳಿಸಿತು. ಪ್ರಥಮ ಸ್ಥಾನಗಳಿಸಿದ ತಂಡಕ್ಕೆ ರೂ.15,000 ನಗದು ಮತ್ತು ಪಾರಿತೋಷಕ, ದ್ವೀತಿಯ ಸ್ಥಾನಗಳಿಸಿದ ತಂಡಕ್ಕೆ ರೂ.10,000 ನಗದು ಮತ್ತು ಪಾರಿತೋಷಕ, ಹಾಗೂ ತೃತಿಯ ಸ್ಥಾನಗಳಿದ ತಂಡಕ್ಕೆ ರೂ.5000 ನಗದು ಮತ್ತು ಪಾರಿತೋಷಕನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ ಮಾದಾರಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಶರಣ ಸಂಸ್ಕøತಿ ಉತ್ಸವದ ಕಾರ್ಯಧ್ಯಕ್ಷರಾದ ಕೆ.ಎಸ್. ನವೀನ್ ಉಪಸ್ಥಿತರಿದ್ದು, ಜಮುರಾ ಕಲಾವಿದರು ಪ್ರಾರ್ಥಿಸಿದರೆ, ಶೃತಿ ಕುಮಾರಿ ಸ್ವಾಗತಿಸಿದರೆ, ವೀಣಾ ವಂದಿಸಿದರೆ, ಶಿಲ್ಪ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link