ರಾಮನನ್ನು ರಾಜಕೀಯ ವಿಷಯವಾಗಿಸಬೇಡಿ : ಅಧೀರ್‌ ರಂಜನ್‌ ಚೌದರಿ

ನವದೆಹಲಿ:

    ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿಯು ರಾಮನನ್ನು ರಾಜಕೀಯ ಸಾಧನವಾಗಿ ಪರಿಗಣಿಸಬಾರದು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಮವಾರ ಹೇಳಿದ್ದಾರೆ. ಚೀನಾ ಮತ್ತು ಮಾಲ್ಡೀವ್ಸ್ ಕುರಿತ ಸರ್ಕಾರದ ನೀತಿಯನ್ನೂ ಅವರು ಪ್ರಶ್ನಿಸಿದ್ದಾರೆ.

    ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಚೌಧರಿ, ಲೋಕಸಭಾ ಚುನಾವಣೆ ಸನ್ನಿಹದಲ್ಲಿರುವಾಗ ನೀವು ದೈವ ರಾಮನ ಹಿಂದೆ ಆಶ್ರಯ ಪಡೆಯುತ್ತಿದ್ದೀರಿ. ನಾವೆಲ್ಲರೂ ಭಗವಾನ್ ರಾಮನನ್ನು ನಂಬುತ್ತೇವೆ, ಇಲ್ಲ. ಅವರನ್ನು ನಿಮ್ಮವರನ್ನಾಗಿ ಮಾಡಬೇಡಿ.ದಯವಿಟ್ಟು ಚುನಾವಣಾ ಸಾಧನವನ್ನಾಗಿ ಮಾಡಿಕೊಳ್ಳಬೇಡಿ. ರಾಮನು ಎಲ್ಲರಿಗೂ ದೇವರಾಗಿ ಉಳಿಯಲಿ ಎಂದು ಹೇಳಿದರು. 

    2014 ರ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿದ ಚೌಧರಿ, ಬಿಜೆಪಿಯು  ವಿದೇಶದಲ್ಲಿರುವ ‘ಕಪ್ಪುಹಣ’ವನ್ನು ಮರಳಿ ತಂದು ಪ್ರತಿಯೊಬ್ಬ ಭಾರತೀಯನ ಖಾತೆಗೆ 15 ಲಕ್ಷ ರೂಪಾಯಿಗಳನ್ನು ಜಮಾ ಮಾಡುವುದಾಗಿ ಭರವಸೆ ನೀಡಿತ್ತು. ಚುನಾವಣೆಯ ನಂತರ, ಪಕ್ಷದ ನಾಯಕರೊಬ್ಬರು ಭರವಸೆಯನ್ನು ಚುನಾವಣಾ ಸ್ಟಂಟ್ ಎಂದು ಹೇಳಿರುವುದಾಗಿ ತಿಳಿಸಿದರು.

    2019 ರ ಚುನಾವಣೆ ಬಂದಾಗ, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು.ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತವು ಬಾಲಾಕೋಟ್ ವೈಮಾನಿಕ ದಾಳಿ ನಡೆಸಿ ಭಯೋತ್ಪಾದಕರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಹೇಳಿರುವ ಸರ್ಕಾರ ವೈಮಾನಿಕ ದಾಳಿಗೆ ಸಂಬಂಧಿಸಿದ ಸತ್ಯವನ್ನು ಇನ್ನೂ ಹಂಚಿಕೊಂಡಿಲ್ಲ ಎಂದರು.

    ಬಾಲಾಕೋಟ್‌ನಲ್ಲಿ ಭಾರತ ಯಾವುದೇ ಮಹತ್ವದ ಗುರಿಯನ್ನು ಮುಟ್ಟಲಿಲ್ಲ ಎಂದು ವಿವಿಧ ಸ್ವತಂತ್ರ ಸಂಘಟನೆಗಳು ಹೇಳಿಕೊಂಡಿವೆ ಎಂದು ಚೌಧರಿ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap