ಶ್ರಾವಣಮಾಸ ಪ್ರಾರಂಭ- ಹೂ ಬೆಲೆ ಗಗನಕ್ಕೆ,

ಪುಷ್ಪ ಕೃಷಿ ಮಾಡಿದ ರೈತರಿಗೆ ಬಂಪರ್ ,ಕೆ.ಜಿ. 240-260 ರೂಪಾಯಿ

ವರದಿ – ಪ್ರದೀಪ್ ಎಡೇಹಳ್ಳಿ

      ಹಬ್ಬಗಳ ಸಾಲಿನ ಶ್ರಾವಣಮಾಸ ಪ್ರಾರಂಭವಾಗಿದೆ, ಹೂವಿನ ಬೆಲೆ ಗಗನಕ್ಕೇರಿದೆ ಆದರೆ ಪುಷ್ಪ ಕೃಷಿ ಮಾಡಿದ ರೈತರು ಬಂಪರ್ ಹೊಡೆದಿದ್ದಾರೆ.

    ನೆಲಮಂಗಲ ತಾಲ್ಲೂಕಿನ ಎಲೇಕ್ಯಾತನಹಳ್ಳಿಯ ರೈತ ವೇಣುಗೋಪಾಲ್ ಸುಮಾರು 11 ಟನ್ ವಿವಿಧ ಜಾತಿಯ ಹೂ ಬೆಳೆದು 1 ಲಕ್ಷ ಆದಾಯ ಪಡೆದು, ಇನ್ನು 03-04 ಆದಾಯ ಗಳಿಕೆಯಲ್ಲಿ ನಿರೀಕ್ಷೆಯಲ್ಲಿದ್ದಾನೆ.

    ನಾಲ್ಕು ಪ್ರಭೇದಗಳ ಹೂ: ಸೇವಂತಿಗೆ ಹೂ ನ ಹೈಬ್ರಿಡ್ ತಳಿ ಸೆಂಟಲ್, ಚಾಕಲೇಟ್, ಸುವರ್ಣ ಎಲ್ಲೋ ಹಾಗೂ ಗುಲಾಬಿಯ ವಿವಿಧ ತಳಿಯನ್ನು 1.5 ಎಕರೆ ಜಾಗದಲ್ಲಿ ಹೂ ಬೆಳೆದು ಹೂ ಗಳ ವರಮಹಾಲಕ್ಷ್ಮಿ ಆಚರಿಸುತ್ತಿದ್ದಾರೆ.

    ಕೆಜಿಗೆ 250 ರೂಪಾಯಿ:ಸಾಲು ಸಾಲು ಹಬ್ಬಗಳ ಹಿನ್ನಲೆ ಹಾಗೂ ಮುಂಗಾರು ಮಳೆ ಕೊರತೆ ಹಿನ್ನಲೆ ಕೆಜಿಗೆ 250-300 ರೂಪಾಯಿವರೆಗೆ ಹೂ ಮಾರಾಟ ವಾಗುತ್ತಿದೆ, ಗುಲಾಬಿ ಮತ್ತು ಸೆಂಟಲ್ ಹೂ ವಿಗೆ ಭಾರಿ ಬೇಡಿಕೆ ಎನ್ನುತ್ತಾರೇ ಹೂ ಬೆಳೆದ ವೇಣುಗೋಪಾಲ್.

ಕಾಂಡ ಹುಳು ಕಾಟ:

    ಅಧಿಕ ಇಳುವರಿ ಹೂ ತಳಿ ಹಾಕಿದ್ದರೂ, ಭೂಮಿಯಲ್ಲೇ ಇರುವ ಕೀಟಗಳು ಇಡೀ ಹೂ, ಕಾಂಡವನ್ನು ಹಾಳು ಮಾಡುತ್ತಿದೆ, ಕ್ಲೋರೋ ಫೇರಸ್ ಹಾಗೂ ಇನ್ನೀತರ ಔಷಧಿ ಸಿಂಪಡಿಸಿದರು ಹೂ ಬೆಳೆಯ ಇಳುವರಿಗೆ ಕೀಟಗಳು ಮತ್ತು ರೋಗ ಅಡ್ಡಗಲಾಗಿದೆ.

 

ರಫ್ತಿಗೆ ಹೆಚ್ವು ಒತ್ತು:

     ಹಬ್ಬದ ಹಿನ್ನಲೆ ಸುಮಾರು 10 ಟನ್ ಹೂ ವೇಣುಗೋಪಾಲ್ ತೋಟದಿಂದ, ತುಮಕೂರು ಮಾರುಕಟ್ಟೆಯಲ್ಲಿ ಬೀಕರಿಯಾಗಿದೆ, ಇನ್ನು ಇಳುವರಿ ಬರಬೇಕಿದ್ದು, ಹೂ ನ್ನು ಕಟಾವು ಮಾಡಲು ಗ್ರಾಮದವರಾದ ಶಿಲ್ಪಾ, ರತ್ನಮ್ಮ, ಮಂಜುನಾಥ್, ಜಯಮ್ಮ, ಲಕ್ಷ್ಮಮ್ಮ, ಹನುಮಕ್ಕ ರ ಸಹಕಾರ ಹೆಚ್ಚಿದೆ ಎನ್ನತ್ತಾರೇ ಪುಷ್ಪ ಕೃಷಿಕ ವೇಣುಗೋಪಾಲ್.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap