ಬೀದಿ ಬದಿ ವ್ಯಾಪಾರಿಗಳ ಯೋಜನೆ; ಪರಾಮರ್ಶನಾ ಸಭೆ

ತುಮಕೂರು:ವೆಂಡಿಂಗ್‍ಜೋನ್‍ಗಳಿಗೆ ವ್ಯಾಪಾರಿಗಳ ಆಯ್ಕೆ ಕುರಿತು ಚರ್ಚೆ

       ಮಹಾನಗರಪಾಲಿಕೆ ಸಭಾಂಗಣದಲ್ಲಿ ಬುಧವಾರ ಡೇನಲ್ಮ್ ಯೋಜನೆಯ ಬೀದಿ ಬದಿ ವ್ಯಾಪಾರಸ್ಥರ ಬೆಂಬಲ ಕಾರ್ಯಕ್ರಮದ ಪರಾಮರ್ಶನಾ ಸಭೆ ನಡೆಯಿತು.

            ಪಟ್ಟಣ ವ್ಯಾಪಾರ ಸಮಿತಿ ಅಧ್ಯಕ್ಷರು ಹಾಗೂ ಆಯುಕ್ತರಾದ ರೇಣುಕಾ, ಮೇಯರ್ ಬಿ.ಜಿ.ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಿಎಂ ಸ್ವನಿಧಿ ಯೋಜನೆಯಡಿ ಮಾಸಾಂತ್ಯಕ್ಕೆ ಪ್ರಗತಿಯ ಕ್ರಮ ವಹಿಸುವುದುಮ ಸ್ಮಾರ್ಟ್‍ಸಿಟಿಯಿಂದ ನಗರದ ವಿವಿಧ ಭಾಗಗಳಲ್ಲಿ ಈಗಾಗಲೇ ನಿರ್ಮಾಣವಾಗುತ್ತಿರುವ ವೆಂಡಿಂಗ್ ಜೋನ್‍ಗಳಿಗೆ ಮಾರ್ಗಸೂಚಿಯನ್ವಯ ವ್ಯಾಪಾರಿಗಳನ್ನು ಆಯ್ಕೆಮಾಡುವ ಕುರಿತು ಚರ್ಚಿಸಲಾಯಿತು.

ವೆಂಡಿಂಗ್ ಮತ್ತು ನಾನ್ ವೆಂಡಿಂಗ್ ಜೋನ್ ನಿರ್ಮಾಣ., ಆತ್ಮನಿರ್ಭರ್ ನಿಧಿ ಯೋಜನೆಯಡಿ ಕಿರುಸಾಲ, ಸಾಮಾಜಿಕ ಆರ್ಥಿಕ ಸಮೀಕ್ಷೆ, ಡಿಜಿಟಲ್ ಆನ್ ಬೋರ್ಡಿಂಗ್, ಸ್ವಿಗ್ಗಿ-ಆಪ್ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚೆ ಮಾಡಲಾಯಿತು.

ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಯಾಜ್, ಉಪ ಆಯುಕ್ತ (ಆಡಳಿತ) ಗಿರೀಶ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕರು, ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕರು, ದೊಡ್ಡ ಯಲ್ಲಪ್ಪ, ಸಮುದಾಯ ಅಧಿಕಾರಿ ರಾಮಾಂಜಿನಪ್ಪ, ರೇವಣ್ಣ, ಶಿವಕುಮಾರ್, ರಾಜಲಕ್ಷ್ಮಿ, ಅಂಜನಪ್ಪ ಹಾಗೂ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link