ಟ್ರಯಂಫ್‌ :ಬರಲಿದೆ ‘ಸ್ಟ್ರೀಟ್ ಟ್ರಿಪಲ್ 765’

ತುಮಕೂರು:

  ಇತ್ತೀಚಿನ ದಿನಗಳಲ್ಲಿ ಯುವ ಜನರು ಬೈಕ್‌ಗಳ ಕಡೆ ಹೆಚ್ಚಿನ ಒಲವು ತೋರುತ್ತಿರುವಾಗ ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಬೈಕ್‌ ಗಳ ಆಗಮನವಾಗುತ್ತಿವೆ ಇವು ಭರಪೂರ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಅದೇರೀತಿ ಬೆಲೆಯು ದುಬಾರಿಯಾಗಿರುತ್ತದೆ. ಸದ್ಯ, ಬ್ರಿಟನ್ ನ ಪ್ರಮುಖ ವಾಹನ ತಯಾರಕ ಕಂಪನಿ ‘ಟ್ರಯಂಫ್’ ತನ್ನ ಬಹುನೀರಿಕ್ಷಿತ ಸ್ಟ್ರೀಟ್ ಟ್ರಿಪಲ್ 765 ಬೈಕ್‌ಗಳನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ತಯಾರಿ ನಡೆಸಿದೆ .

     ‘ಸ್ಟ್ರೀಟ್ ಟ್ರಿಪಲ್ 765’ ಲೈನ್-ಅಪ್ ಬೈಕ್‌ಗಳನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಾಗುವುದು ಎಂದು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ. ಈಗಾಗಲೇ ಬುಕಿಂಗ್ ಆರಂಭವಾಗಿದ್ದು, ಆಸಕ್ತ ಗ್ರಾಹಕರು, ಟ್ರಯಂಫ್ ಅಧಿಕೃತ ಡೀಲರ್ ಶಿಪ್‌ಗೆ ಭೇಟಿ ನೀಡುವ ಮೂಲಕ ರೂ.50,000 ಮುಂಗಡ ಹಣ ಪಾವತಿ ಬೈಕ್‌ನ್ನು ಬುಕ್ ಮಾಡಬಹುದು. ಹೊಚ್ಚ ಹೊಸ ಬೈಕ್ ವಿತರಣೆಯನ್ನು ಏಪ್ರಿಲ್ ತಿಂಗಳಿಂದ ಪ್ರಾರಂಭಿಸಲಾಗುತ್ತದೆ.

    ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ನೂತನ ಸ್ಟ್ರೀಟ್ ಟ್ರಿಪಲ್ 765 ಬೈಕ್‌ನ್ನು ಎರಡು ರೂಪಾಂತರಗಳಲ್ಲಿ ಖರೀದಿಗೆ ನೀಡಲಿದೆ. ಅವುಗಳೆಂದರೆ, ಆರ್ ಹಾಗೂ ಆರ್‌ಎಸ್. ಇವೆರೆಡು ಬೈಕ್‌ಗಳು ಸಾಮಾನ್ಯವಾಗಿ ಒಂದೇ ರೀತಿಯ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿವೆ. 5.0 – ಇಂಚಿನ TFT ಇನ್ಸ್ಟ್ರುಮೆಂಟ್ ಕನ್ಸೋಲ್, ಮೈ ಟ್ರಯಂಫ್ ಕನೆಕ್ಟಿವಿಟಿ ಸಿಸ್ಟಮ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಹಾಗೂ ಬ್ಲೂಟೂತ್ ಆಯ್ಕೆಯನ್ನು ಹೊಂದಿವೆ.

    ಆರ್ ರೂಪಾಂತರವು ನಾಲ್ಕು ಡ್ರೈವಿಂಗ್ ಮೋಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ರೈನ್, ರೋಡ್, ಸ್ಪೋರ್ಟ್ ಹಾಗೂ ಕಸ್ಟಮ್. ಆರ್‌ಎಸ್ ರೂಪಾಂತರವು ಹೆಚ್ಚುವರಿಯಾಗಿ ಟ್ರಕ್ ಮೋಡ್ ಅನ್ನು ಹೊಂದಿದೆ. ಈ ನೂತನ ಬೈಕ್‌ನ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 12,000 rpmನಲ್ಲಿ 128 bhp ಪವರ್, 9,500 rpmನಲ್ಲಿ 80 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6- ಸ್ವೀಡ್ ಗೇರ್ ಬಾಕ್ಸ್ ಮತ್ತು ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್ ಆಯ್ಕೆಯನ್ನು ಹೊಂದಿದೆ.

    ನೂತನ ಸ್ಟ್ರೀಟ್ ಟ್ರಿಪಲ್ 765 ಬೈಕ್ ವಿನ್ಯಾಸ ಬಗ್ಗೆ ಹೇಳುವುದಾದರೆ, ಇದು ಅತ್ಯಾಧುನಿಕ LED ಹೆಡ್ ಲ್ಯಾಂಪ್ ಮತ್ತು 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಅಲ್ಲದೆ, ಈ ಬೈಕ್ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಖರೀದಿಗೆ ದೊರೆಯಲಿದೆ. ಆರ್ ರೂಪಾಂತರವು ಎರಡು ಬಣ್ಣಗಳ ಆಯ್ಕೆಯಲ್ಲಿ ಸಿಗಲಿದೆ. ಅವುಗಳೆಂದರೆ, ಸಿಲ್ವರ್, ವೈಟ್. ಆರ್‌ಎಸ್ ರೂಪಾಂತರವು ಸಿಲ್ವರ್, ರೆಡ್ ಮತ್ತು ಯೆಲ್ಲೋ ಬಣ್ಣಗಳಲ್ಲಿ ದೊರೆಯಲಿದೆ.

     ಇನ್ನೂ ಭಾರತದ ಮಾರುಕಟ್ಟೆಯಲ್ಲಿ ಟ್ರಯಂಫ್ ಕಂಪನಿ ಸ್ಟ್ರೀಟ್ ಟ್ರಿಪಲ್ 765 ಬೈಕಿನ ಎಸ್ ರೂಪಾಂತರ ಮಾತ್ರ ಖರೀದಿಗೆ ಲಭ್ಯವಿದ್ದು, ರೂ.9,21,017 ಬೆಲೆಯಲ್ಲಿ ಸಿಗಲಿದೆ. ಇದು 765ಸಿಸಿ ಥ್ರೀ ಸಿಲಿಂಡರ್ ಎಂಜಿನ್ ಹೊಂದಿದ್ದು, 111 bhp ಗರಿಷ್ಠ ಪವರ್ ಹಾಗೂ 73 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯಲಿದ್ದು, ಈ ಬೈಕ್ ಬರೋಬ್ಬರಿ 166 ಕೆಜಿ ತೂಕವಾಗಿದೆ. ಫ್ರಂಟ್ 310ಎಂಎಂ ರೇರ್ 220ಎಂಎಂ ಡಿಸ್ಕ್ ಬ್ರೇಕ್ ಸಿಸ್ಟಮ್ ಹೊಂದಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಸ್ಟ್ರೀಟ್ ಟ್ರಿಪಲ್ 765 ಎಸ್ ರೂಪಾಂತರವು ಐಷರಾಮಿ ಬೈಕ್ ಗಳಾದ ಬೆನೆಲ್ಲಿ TNT899, ಕವಾಸಕಿ Z900, ಡುಕಾಟಿ ಮಾನ್‌ಸ್ಟರ್ 821 ಮತ್ತು ಯಮಹಾ MT-09ಗೆ ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap