ಚಿಕನ್‌ ಶವರ್ಮ ಸೇವಿಸಿ ಯುವಕನ ಸಾವು…..!

ಮುಂಬೈ:

     ಚಿಕನ್ ಶವರ್ಮ ಸೇವನೆ ಮಾಡಿದ 19 ವರ್ಷದ ಯುವಕ ಸಾವನ್ನಪ್ಪಿದ್ದು, ಪ್ರಕರಣದ ಸಂಬಂಧ ಇಬ್ಬರು ವ್ಯಾಪಾರಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತ ಯುವಕ ಸ್ಟಾಲ್ ನಿಂದ ಚಿಕನ್ ಶರ್ವಮ ತಂದು ಸೇವನೆ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇ.-3 ರಂದು ಟ್ರಾಂಬೆಯಲ್ಲಿ ಈ ಘಟನೆ ವರದಿಯಾಗಿದೆ.

    ಪ್ರಥಮೇಶ್ ಭೋಕ್ಸೆ ಮೃತ ಯುವಕನಾಗಿದ್ದು, ಚಿಕನ್ ಶವರ್ಮ ಸೇವನೆ ಬಳಿಕ ಹೊಟ್ಟೆನೋವು, ವಾಂತಿಯಾಗಿದ್ದು, ವೈದ್ಯಕೀಯ ನೆರವಿಗಾಗಿ ಸರ್ಕಾರಿ ಆಸ್ಪತ್ರೆಗೆ ಹೋದರೂ ಪ್ರಯೋಜನವಾಗಲಿಲ್ಲ.

    ಮನೆಗೆ ಹಿಂದಿರುಗಿದ ನಂತರ ಆತ ಮತ್ತೆ ಅನಾರೋಗ್ಯಕ್ಕೀಡಾದ. ಈ ಬಳಿಕ ಯುವಕನ ಕುಟುಂಬ ಸದಸ್ಯರು ಆತನನ್ನು ಮೇ 5 ರಂದು ಕೆಇಎಂ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದರು ಎಂದು ಟ್ರಾಂಬೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

   ಚಿಕಿತ್ಸೆ ನೀಡಿದರೂ ಮತ್ತೆ ಆತ ಅನಾರೋಗ್ಯಕ್ಕೀಡಗಿ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Recent Articles

spot_img

Related Stories

Share via
Copy link