ತುಮಕೂರು:
ಭಾನುವಾರ ಮಧ್ಯಾಹ್ನ ಸಿದ್ದಗಂಗಾ ಮಠದ ಗೋ ಕಟ್ಟೆ ಬಳಿ ಕೈ ತೊಳೆಯಲು ಹೋದ ಬಾಲಕನೊಬ್ಬ ಆಯತಪ್ಪಿ ಕಟ್ಟೆಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಇಬ್ಬರು ಸ್ನೇಹಿತರು, ಬಾಲಕನ ತಾಯಿ ಹಾಗೂ ವ್ಯಕ್ತಿ ಯೊಬ್ಬರು ಮೃತಪಟ್ಟಿರುವ ಮನಕಲಕುವ ಘಟನೆ ನಡೆದಿದೆ.
ಭಾನುವಾರ ರಜಾದಿನದ ಹಿನ್ನೆಲೆಯಲ್ಲಿ ಗೋಕಟ್ಟೆ ಬಳಿ ಸ್ನೇಹಿತರು ತಾಯಿ, ಸಹೋದರಿ ಜೊತೆ ತೆರಳಿದ್ದ ಮಠದ ವಿದ್ಯಾರ್ಥಿ ರಕ್ಷಿತ್ ಅಲ್ಲಿ ಮರದ ಕೊಂಬೆ ಮೇಲೆ ಹತ್ತಿ ಸಂಭ್ರಮಿಸಿದ್ದರಲ್ಲದೆ, ಗೋಕಟ್ಟೆ ಬಳಿ ಸೆಲ್ಪಿ ಸಹ ತೆಗೆದುಕೊಂಡಿದ್ದರು.
ಈ ವೇಳೆ ಗೋಕಟ್ಟೆ ಬಳಿಯೇ ಮಧ್ಯಾಹ್ನ 1ಗಂಟೆಗೆ ಊಟ ಮಾಡಿ ಕೈ ತೊಳೆಯಲು ಮುಂದಾದಾಗ ಈ ಅವಘಡ ಸಂಭವಿಸಿದೆ.
ರಂಜಿತ್ ಕೈ ತೊಳೆಯಲು ಮುಂದಾದಾಗ ಕಾಲುಜಾರಿ ಕಟ್ಟೆಗೆ ಬಿದ್ದಿದ್ದಾನೆ. ಸ್ನೇಹಿತ ಬಿದ್ದಿದ್ದನ್ನು ಕಂಡು ತಕ್ಷಣವೇ ಕಟ್ಟೆಗೆ ಸ್ನೇಹಿತರಾದ
ಶಂಕರ್, ಹರ್ಷಿತ್ ಹಾಗೂ ರಂಜಿತ್ ತಾಯಿ ಲಕ್ಷ್ಮೀ ಹಾಗೂ ಮತ್ತೊರ್ವ ಪೋಷಕ ಮಹಾದೇವಪ್ಪ ಸಹ ಧುಮುಕಿದ್ದಾರೆ.
ಆದರೆ ಅದೃಷ್ಟ ವಶಾತ್ ರಂಜಿತ್ ಪ್ರಾಣಪಾಯದಿಂದ ಪಾರಾಗಿದ್ದು ಉಳಿದ ನಾಲ್ವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಲಕ್ಷ್ಮೀ ಹಾಗೂ ಹರ್ಷಿತ್ ಮೃತದೇಹವನ್ನ ಸಂಜೆ ವೇಳೆಗೆಹೊರ ತೆಗೆದಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು
ಇನ್ನುಳಿದ ಎರಡು ಮೃತದೇಹಗಳಿಗಾಗಿ ಹುಡುಕಾಟ ಮುಂದುವರಿಸಿದ್ದರು. ಘಟನಾ ಸ್ಥಳಕ್ಕೆ ಸಿದ್ಧಗಂಗಾ ಶ್ರೀ ಗಳು ಡಿಸಿ ಕೆ. ಶ್ರೀ ನಿನಾಸ್, ಎಡಿಸಿ ಅರವಿಂದ್ ಬಿ. ಕರಾಳೆ, ತಹಸೀಲ್ದಾರ್ ಸಿದ್ದೇಶ್. ವಿ., ಎಸ್ಪಿ ರಾಹುಲ್ ಕುಮಾರ್ ಇತರರು ಭೇಟಿ ಕೊಟ್ಟ ರು.