ಹೊಸದಿಲ್ಲಿ:
ಉಕ್ರೇನ್‌ನಿಂದ ಗುರುವಾರ ದಿಲ್ಲಿಗೆ ವಾಪಸಾದ ಕೇರಳ ಮೂಲದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಬುಲೆಟ್ ಪತ್ತೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಿಐಎಸ್‌ಎಫ್ ನ ಸಿಬಂದಿ ವಿದ್ಯಾರ್ಥಿಯ ಬ್ಯಾಗ್ ಅನ್ನು ತಪಾಸಣೆ ನಡೆಸಿದ ವೇಳೆ ಗುಂಡು ಪತ್ತೆಯಾಯಿತು.
ತತ್‌ಕ್ಷಣ ಸಿಐಎಸ್‌ಎಫ್ ಅಧಿಕಾರಿಗಳು ವಿದ್ಯಾರ್ಥಿಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗಾಗಿ ಕರೆದೊಯ್ದರು. ದಿಲ್ಲಿಯಿಂದ ಏರ್ ಏಷ್ಯಾ ವಿಮಾನ ಮೂಲಕ ಗುರುವಾರವೇ ಈ ವಿದ್ಯಾರ್ಥಿ ಕೇರಳಕ್ಕೆ ಪ್ರಯಾಣ ಬೆಳೆಸಬೇಕಿತ್ತು.
ಯುದ್ಧಪೀಡಿತ ಪ್ರದೇಶದಿಂದ ತಾಯ್ನಾಡಿಗೆ ವಾಪಸಾದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಗುಂಡು ಪತ್ತೆಯಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದ್ದು ತನಿಖೆ ಮುಂದುವರಿದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ