ಮಧುಗಿರಿ :
ಹಾಸ್ಟಲ್ ವಾರ್ಡನ್ ಅಮಾನತ್ತು ಖಂಡಿಸಿ ಬೆಳ್ಳಂಬೆಳಗ್ಗೆ ಹಾಸ್ಟೆಲ್ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ. ನಡೆಸಿದರು.
ಪಟ್ಡಣದ ಮಾರುತಿನಗರದ ಸಮೀಪ ಇರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿ ಯಾಗಿ ಗಂಡು ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಜಿಪಂ ಸಿಇಓ ರವರ ಆದೇಶದ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿತ್ತು.
ವಾರ್ಡನ್ ನಿವೇದಿತಾ ಯಾವುದೇ ತಪ್ಪು ಮಾಡಿಲ್ಲ ಯಾರೋ ಮಾಡಿದ ತಪ್ಪಿಗೆ ವಾರ್ಡನ್ ಗೆ ಶಿಕ್ಷೆ ಸರಿಯಲ್ಲ
ಅವರ ಪೋಷಕರಿಗೆ ವಿದ್ಯಾರ್ಥಿನಿ ಗರ್ಬಿಣಿಯಾಗಿರುವ ವಿಷಯ ಗೊತ್ತಿಲ್ಲ.ವಿದ್ಯಾರ್ಥಿನಿ ಎಲ್ಲೋ ಮಾಡಿಕೊಂಡಿರುವ ತಪ್ಪಿಗೆ ಇವರಿಗೆ ಶಿಕ್ಷೆ ಏಕೆಂದು ಪ್ರತಿಭಟಿಸಿದರು.
ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ತಿಂಡಿ, ಊಟ ಬಿಟ್ಟು ಪ್ರತಿಭಟನೆ ಮಾಡುತ್ತೇವೆ. ಶಾಲೆಗೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.ಸ್ಥಳಕ್ಕೆ ಸಮಾಜ ಕಲ್ಯಾಣಾಧಿಕಾರಿ ಬೇಟಿ ನೀಡಿ ಮಕ್ಕಳ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.
ವಿದ್ಯಾರ್ಥಿಗಳ ಮನವಿ ಆಲಿಸಿದ ರಾಜೇಂದ್ರ ರಾಜಣ್ಣ ಮಾತನಾಡಿ ನೀವೆಲ್ಲ ನನ್ನ ಮಕ್ಕಳ ಸಮಾನ. ನಿಮ್ಮಲ್ಲರಿಗೂ ಉತ್ತಮ ಭವಿಷ್ಯವಿದ್ದು, ಈ ರೀತಿ ಉಪಹಾರ ಸೇವಿಸದೇ ಶಾಲೆಗೆ ಹೋಗದೇ ಹಠ ಮಾಡಬೇಡಿ. ಎಲ್ಲರೂ ಶಿಕ್ಷಣದ ಕಡೆ ಗಮನಹರಿಸಿ ಉತ್ತಮ ಅಂಕ ಗಳಿಕೆಯ ಕಡೆ ಗಮನಹರಿಸಿ. ವಾರ್ಡನ್ ನಿವೇದಿತಾ ರವರನ್ನು ಇದೇ ಹಾಸ್ಟೆಲ್ ನಲ್ಲಿ ಮತ್ತೆ ಮುಂದುವರಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಬಳಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ಮನವೊಲಿಸಿದಾಗ ಬೆಳಗಿನ ಉಪಹಾರ ವಿದ್ಯಾರ್ಥಿಗಳು ಶಾಲೆಗೆ ತೆರಳಿದರು.
ವೈದ್ಯಕೀಯ ಪರೀಕ್ಷೆಗೆ ಗೈರು : ಆ. 11 ರಂದು ವಸತಿ ಶಾಲೆಯಲ್ಲಿ ನಡೆದ ವೈದ್ಯಕೀಯ ತಪಾಸಣೆಗೆ ಬಾಲಕಿಯು ಒಳಗಾಗಿರಲಿಲ್ಲ ಎಂದು ಹೆಸರು ಹೇಳದ ವಿದ್ಯಾರ್ಥಿನಿಯರು ತಿಳಿಸಿದ್ದಾರೆ. ನನಗೆ ಸ್ಪೆಷಲ್ ಕ್ಲಾಸ್ ಇದ್ದು ನಾನು ಬೇಗ ಶಾಲೆಗೆ ಹೋಗಬೇಕು ಎಂದು ಹೇಳಿ ವೈದ್ಯಕೀಯ ತಪಾಸಣೆಯ ದಿನದಂದು ತಪ್ಪಿಸಿಕೊಂಡಿದ್ದಾಳೆ ಹೊಟ್ಟೆಯು ಕಾಣದಂತೆ ಹೊಟ್ಟೆಗೆ ಬಿಗಿಯಾಗಿ ಬಟ್ಟೆಯನ್ನು ಸುತ್ತುತ್ತಿದ್ದಳು ಎಂದು ಹೇಳಿದ್ದಾರೆ.
ಸ್ಥಳಕ್ಕೆ ತಾಪಂ ಇಓ ಲಕ್ಷಣ್ , ಸಮಾಜ ಕಲ್ಯಾಣ ಇಲಾಖೆಯ ಶಿವಣ್ಣ , ಸಿಡಿಪಿಓ ಕಮಲಬಾಯಿ , ಡಿವೈಎಸ್ ಪಿ ರಾಮಚಂದ್ರಪ್ಪ , ಮುಖಂಡ ಎಂ ಕೆ ನಂಜುಂಡಯ್ಯ , ಸಾಧಿಕ್ ಹಾಗೂ ಮತ್ತಿತರ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ