ನಾಗಪಟ್ಟಣಂ:
ವೆಟ್ಟುವನ್ ಚಿತ್ರದ ಶೂಟಿಂಗ್ ವೇಳೆ ನಡೆದ ಅಪಘಾತದಲ್ಲಿ ಸ್ಟಂಟ್ ಮಾಸ್ಟರ್ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದರ ಮನಕಲಕುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಾ ರಂಜಿತ್ ನಿರ್ದೇಶಿರುವ ಈ ಚಿತ್ರದಲ್ಲಿ ಆರ್ಯ ಮುಖ್ಯ ಪಾತ್ರ ವಹಿಸಿದ್ದಾರೆ. ಇದರ ಸಾಹಸ ದೃಶ್ಯಗಳನ್ನು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆಸಲಾಗುತ್ತಿತ್ತು. ಈ ವೇಳೆ ಕಾರು ಅಪಘಾತದಲ್ಲಿ ಅನುಭವಿ ಸ್ಟಂಟ್ ಮಾಸ್ಟರ್ ಎಸ್.ಎಂ.ರಾಜು ಅವರು ಸಾವನ್ನಪ್ಪಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಇದರ ಭಯಾನಕ ದೃಶ್ಯಗಳನ್ನು ಕಾಣಬಹುದು.
ತಮಿಳು ಚಿತ್ರ ವೆಟ್ಟುವನ್ ಸೆಟ್ನಲ್ಲಿ ಜುಲೈ 13 ರಂದು ನಡೆದ ದುರಂತದ ಸ್ಟಂಟ್ ಮಾಸ್ಟರ್ ಎಸ್.ಎಂ.ರಾಜು ಅವರ ಜೀವವನ್ನು ಬಲಿ ತೆಗೆದುಕೊಂಡಿದೆ. ಈ ದುರಂತದ ಆಘಾತಕಾರಿ ವಿಡಿಯೊ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನಾಗಪಟ್ಟಣಂ ಜಿಲ್ಲೆಯಲ್ಲಿ ಚಿತ್ರದ ಸಾಹಸ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಈ ವಿಡಿಯೋದಲ್ಲಿ ಕೆಮರಾದ ಹಿಂದಿನಿಂದ ಅತ್ಯಂತ ವೇಗವಾಗಿ ಬಂದ ಕಾರು ಭಯಾನಕ ರೀತಿಯಲ್ಲಿ ಉರುಳಿದೆ. ಕೂಡಲೇ ಸೆಟ್ ನಲ್ಲಿದ್ದ ಸಿಬ್ಬಂದಿ ಅಪಘಾತದ ಓಡಿದರು. ನಜ್ಜುಗುಜ್ಜಾದ ವಾಹನದಿಂದ ರಾಜು ಅವರನ್ನು ಹೊರಗೆಳೆದು ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ.
ತಮಿಳು ಚಿತ್ರೋದ್ಯದಮದಲ್ಲಿ ಹೆಸರಾಂತ ಸಾಹಸ ನಿರ್ದೇಶಕರಾಗಿದ್ದ ಎಸ್.ಎಂ. ರಾಜು ಹಲವಾರು ಭಯಾನಕ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇವರ ಹಠಾತ್ ನಿಧನವು ಕಾಲಿವುಡ್ನಲ್ಲಿ ಆಘಾತವನ್ನು ಮಾಡಿದೆ. ಉಂಟು ಮಾಡಿದೆ.
ರಾಜು ಅವರೊಂದಿಗೆ ಅನೇಕ ಸಾಹಸಮಯ ಚಿತ್ರಗಳಲ್ಲಿ ನಟಿಸಿದ್ದ ನಟ ವಿಶಾಲ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂತಾಪ ವ್ಯಕ್ತಪಡಿಸಿದ್ದು, ಚಿತ್ರಕ್ಕಾಗಿ ಕಾರು ಉರುಳಿಸುವ ಸನ್ನಿವೇಶವನ್ನು ನಿರ್ವಹಿಸುವಾಗ ಸ್ಟಂಟ್ ಕಲಾವಿದ ರಾಜು ನಿಧನರಾದರು ಎಂಬ ಅಂಶವನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜು ಅವರ ಅಕಾಲಿಕ ನಿಧನದ ಬಳಿಕ ವೆಟ್ಟುವನ್ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ. ತನಿಖೆ ನಡೆಸಲಾಗುತ್ತಿದೆ. ಈ ದುರಂತವು ಮತ್ತೊಮ್ಮೆ ಸ್ಟಂಟ್ ವೃತ್ತಿಪರರು ಎದುರಿಸುತ್ತಿರುವ ಅಪಾಯಗಳನ್ನು ಮತ್ತು ಸೆಟ್ಗಳಲ್ಲಿ ಕಠಿಣ ಸುರಕ್ಷತಾ ಕ್ರಮಗಳು ಅಗತ್ಯವಾಗಿರುವುದನ್ನು ಚರ್ಚಿಸುವಂತೆ ಮಾಡಿದೆ.








