ಬೆಂಗಳೂರು :
‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನ ಅಬ್ಬರವನ್ನೂ ಇನ್ನೂ ಕಡಿಮೆ ಮಾಡಿಲ್ಲ. ಸಿನಿಮಾ ಬಿಡುಗಡೆ ಆಗಿದೆ ಬರೋಬ್ಬರಿ 38 ದಿನಗಳು ಕಳೆದಿವೆ. ಈ ಸಂದರ್ಭದಲ್ಲೂ ಸಿನಿಮಾ ಕೋಟಿ ರೂಪಾಯಿ ಸಮೀಪ ಕಲೆಕ್ಷನ್ ಮಾಡುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಈ ಚಿತ್ರದ ಭಾರತದ ಗ್ರಾಸ್ ಕಲೆಕ್ಷನ್ 100 ಕೋಟಿ ರೂಪಾಯಿ ಆಗಿದೆ ಅನ್ನೋದು ವಿಶೇಷ.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾ ಒಟ್ಟಾರೆ 120 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ 90 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಆಗಿದೆ. ಗ್ರಾಸ್ ಕಲೆಕ್ಷನ್ 105 ಕೋಟಿ ರೂಪಾಯಿ ಆಗಿದೆ. ವಿದೇಶದಲ್ಲಿ ಸಿನಿಮಾಗೆ 15 ಕೋಟಿ ರೂಪಾಯಿ ಹರಿದು ಬಂದಿದೆ ಎಂಬುದು ವಿಶೇಷ.
ಈ ಚಿತ್ರ ಭಾನುವಾರ (ಆಗಸ್ಟ್ 31) 80 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಸಿನಿಮಾಗೆ ಇದು 38ನೇ ದಿನ. ದೊಡ್ಡ ದೊಡ್ಡ ಸಿನಿಮಾಗಳ ಅಬ್ಬರದ ಮಧ್ಯೆಯೂ ಇಷ್ಟು ಉತ್ತಮ ಕಲೆಕ್ಷನ್ ಮಾಡುತ್ತಿರುವುದು ಚಿತ್ರದ ಹೆಚ್ಚುಗಾರಿಕೆ. ಸಿನಿಮಾ ಒಟಿಟಿಗೆ ಬರಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಆದಾಗ್ಯೂ ಸಿನಿಮಾನ ಥಿಯೇಟರ್ನಲ್ಲಿ ನೋಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಮೊದಲ ದಿನ ಈ ಚಿತ್ರ 78 ಲಕ್ಷ ರೂಪಾಯಿ ಗಳಿಕೆ ಮಾಡಿತ್ತು. ಆ ಬಳಿಕ ಸಿಕ್ಕ ಬಾಯ್ಮಾತಿನ ಪ್ರಚಾರ ಚಿತ್ರಕ್ಕೆ ಸಹಕಾರಿ ಆಗಿದೆ.
‘ಸು ಫ್ರಮ್ ಸೋ’ ಸಿನಿಮಾಗೆ ರಾಜ್ ಬಿ ಶೆಟ್ಟಿ ನಿರ್ಮಾಣ ಇದೆ. ಈ ಚಿತ್ರದ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಅವರಿಗೆ ಮುಂದಿನ ಸಿನಿಮಾ ನಿರ್ಮಾಣಕ್ಕೆ ಸಾಕಷ್ಟು ಹಣ ಸಿಕ್ಕಂತೆ ಆಗಿದೆ. ಇನ್ನು, ನಿರ್ದೇಶಕ ಜೆಪಿ ತುಮಿನಾಡ್ ಅವರು ಮೊದಲ ಪ್ರಯತ್ನದಲ್ಲೇ ಯಶಸ್ಸು ಕಂಡಿದ್ದಾರೆ. ಹಲವು ನಾಟಕಗಳನ್ನು ಮಾಡಿ ಅವರು ಮೆಚ್ಚುಗೆ ಪಡೆದಿದ್ದರು.








