ರಾಮ ಪ್ರಾಣ ಪ್ರತಿಷ್ಠೆ ಬಗ್ಗೆ ನಟ ಸುದೀಪ್‌ ಹೇಳಿದ್ದೇನು…..?

ಬೆಂಗಳೂರು:

     ವಾಲ್ಮೀಕಿಗಳು ರೂಪಿಸಿದ ಶ್ರೀರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನೇಕೆ ಕೊಟ್ಟೆ, ನಿನ್ನ ಕೀರ್ತನೆಗೆ ಎರಡೇ ಕಿವಿಗಳು…‘ ಎಂದು ಸುದೀಪ್ ಬರೆದುಕೊಂಡಿದ್ದಾರೆ.

     ಈ ಸಂಬಂಧ ಟ್ವೀಟ್ ಮಾಡಿರುವ ಸುದೀಪ್, ‘ರಾಮ ಜಯ ರಾಮ, ಆದಿ ಗುರು ಮಹರ್ಷಿ ಶ್ರೀ ವಾಲ್ಮೀಕಿ ಮೊದಲು ನಿಮ್ಮ ಕಥೆ ಹೇಳಿದರು. ವಾಲ್ಮೀಕಿಗಳು ರೂಪಿಸಿದ ಶ್ರೀರಾಮ ನೀನು ನಮ್ಮ ಎದೆಯಲ್ಲಿ ಶಾಶ್ವತವಾಗಿ ನಿಂತೆ. ವರ್ಷಗಳ ಕಾಯುವಿಕೆ ನಂತರ ಇಂದು ವಿರಾಜಮಾನನಾದೆ ಗುಡಿಯೊಳಗೆ. ನಿನ್ನ ಕಣ್ತುಂಬಿಕೊಳ್ಳಲು ಎರಡೇ ಕಣ್ಣನೇಕೆ ಕೊಟ್ಟೆ, ನಿನ್ನ ಕೀರ್ತನೆಗೆ ಎರಡೇ ಕಿವಿಗಳು…‘ ಎಂದು ಸುದೀಪ್ ಬರೆದುಕೊಂಡಿದ್ದಾರೆ.

   ‘ನಮ್ಮದು ಎಂತಹ ಪುಣ್ಯ. ಕರುನಾಡಿನಿಂದ ವಿಗ್ರಹವಾಗಿ ರೂಪುಗೊಂಡೆ. ಕರ್ನಾಟಕದ ಮಣ್ಣಿನ ಗರ್ಭದಿಂದ ಎದ್ದು ಬಂದೆ. ನಿನ್ನ ಆಲಯ ಕಟ್ಟಲು ಶ್ರೀ ವಿಶ್ವ ಪ್ರಸನ್ನ ತೀರ್ಥ ಗುರುಗಳಿಗೆ ಅದೃಷ್ಟ ಕೊಟ್ಟೆ. ಅರುಣ್‌ ಯೋಗರಾಜ್‌ ಅವರಿಗೆ ನಿನ್ನ ಕೆತ್ತಲು ಕಲಾಶೀರ್ವಾದವಾದೆ. ನಿನ್ನ ಪರಮ ಭಕ್ತ ಕನ್ನಡದ ಮಣ್ಣಿನ ವೀರ ಹನುಮಾನ. ಇದು ಕರ್ನಾಟಕಕ್ಕೆ ನಿಜವಾದ ಸಮ್ಮಾನ. ಜೈಶ್ರೀರಾಮ್‌’ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

    ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಇಂದು (ಸೋಮವಾರ) ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅತ್ಯಂತ ಸಂಭ್ರಮದಿಂದ ನಡೆಯಿತು. ಇದೇ ವೇಳೆ ನಟ ಕಿಚ್ಚ ಸುದೀಪ್  ಅಯೋಧ್ಯೆಯ ರಾಮಮಂದಿರ ಮತ್ತು ಕರ್ನಾಟಕಕ್ಕೆ ದೊರಕಿರುವ ಅವಕಾಶ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap