ತಾಲೂಕಿನ 5 ಸಕ್ಕರೆ ಕಾರ್ಖಾನೆಗಳಲ್ಲಿಯೆ ಕೃಷ್ಣಾ ಸ.ಸ.ಕಾರಖಾನೆ ಕಬ್ಬಿಗೆ ಅತೀ ಹೆಚ್ಚು ಬೆಲೆ ಪಾವತಿಸುತ್ತಿದೆ: ಪರಪ್ಪ ಸವದಿ

ಅಥಣಿ:

   ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆಯ ಸನ್ 2023-24ನೇ ಸಾಲಿನ 32ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಕಾರಖಾನೆಯ ಆವರಣದಲ್ಲಿ ಕಾರ್ಖಾನೆಯ ಅಧ್ಯಕ್ಷರಾದ ಪರಪ್ಪ ಸವದಿ ಅವರ ಅಧ್ಯಕ್ಷತೆಯಲ್ಲಿ ಶಾಂತ ರೀತಿಯಲ್ಲಿ ನಡೆಯಿತು.ಸರ್ವಸಾಧಾರಣ ಸಭೆಯಲ್ಲಿ ಸನ್ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಓದಿ ಅಂಗೀಕರಿಸಲಾಯಿತು . ಇದೆ ವೇಳೆ 2023-24ನೇ ಸಾಲಿನ ಲೆಕ್ಕಪರಿಶೋಧನೆಯಾದ ಅಢಾವೆ, ಉತ್ಪಾದನೆ, ವ್ಯಾಪಾರ ಹಾಗೂ ಲಾಭ ಪರಿಶೀಲಿಸಿ ಮಂಜೂರಿ ನೀಡಿದರು.

   ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ ಅವರು ಸನ್ 2023-2 4ನೇ ಸಾಲಿನ ಅಂದಾಜು ಆಯವ್ಯಯ ನಿವ್ವಳ ಲಾಭ/ಹಾನಿ ಕುರಿತು ವಿವರಿಸಿದರು. ಸನ್ 2024-25ನೇ ಸಾಲಿಗೆ ಲೆಕ್ಕಪರಿಶೋಧಕರ ನೇಮಕಾತಿ ನಡೆಸಿ 2024-25ನೇ ಸಾಲಿಗಾಗಿ ಕಾರಖಾನೆಯು ಹಾಕಿಕೊಂಡಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.ಕೃಷ್ಣಾ ಸಹಕಾರಿ ಸಕ್ಕರೆ ಕಾರಖಾನೆ ಇತ್ತೀಚಿನ ವರ್ಷಗಳ ಅವಧಿಯಲ್ಲಿ ಅಥಣಿ ತಾಲೂಕಿನ 5 ಸಕ್ಕರೆ ಕಾರಖಾನೆಗಳಲ್ಲಿಯೇ ಪ್ರತಿ ಟನ್ ಕಬ್ಬಿಗೆ ಅತೀ ಹೆಚ್ಚು ಬೆಲೆ ಪಾವತಿಸಲಾಗಿದೆ ಎಂದು ಸಕ್ಕರೆ ಕಾರಖಾನೆ ಅಧ್ಯಕ್ಷ ಪರಪ್ಪ ಸವದಿ ಹೇಳಿದರು. ಹಾಗೆ ಮಾತು ಮುಂದು ವರೆಸಿದ ಅವರು ಮುಂದಿನ ದಿನಗಳಲ್ಲಿ ಕಾರಖಾನೆಯಲ್ಲಿ 100 ಕೆ.ಎಲ್.ಪಿ.ಡಿ. ಎಥನಾಲ್ ಘಟಕ ಪ್ರಾರಂಭಿಸುವ ಕುರಿತು ತಿಳಿಸಿದರು.

    ಸಭೆಯಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಕರ. ವಾಘಮೋಡೆ, ನಿರ್ದೇಶಕ ಮಂಡಳಿ ಸದಸ್ಯರಾದ ಗುರುಬಸು ತೆವರಮನಿ, ಶಾಂತಿನಾಥ ನಂದೇಶ್ವರ, ಘೂಳಪ್ಪ ಜತ್ತಿ, ಶ್ರೀಮತಿ ರುಕ್ಮೀಣಿ ಕುಲಕರ್ಣಿ, ರಮೇಶ ಪಟ್ಟಣ, ಸೌರಭ ಪಾಟೀಲ, ಶ್ರೀಮತಿ ಸುನಂದಾ ನಾಯಿಕ, ಸಿದ್ರಾಯ ನಾಯಿಕ, ಮಲ್ಲಿಕಾರ್ಜುನ ಗೋಟಖಿ‌ಂಡಿ, ಹಣಮಂತ ಜಗದೇವ, ವಿಶ್ವನಾಥ ಪಾಟೀಲ, ಪಿ.ಸಿ.ಪಾಟೀಲ ಸೇರಿದಂತೆ ಕಾರಖಾನೆಯ ವಿಭಾಗಾಧಿಕಾರಿಗಳು, ಕಾರ್ಖಾನೆಯ ವ್ಯವಸ್ಥಾಪಕ ಸುರೇಶ್ ಟಕ್ಕನ್ನವರ,ರೈತ ಸದಸ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap