ಸುಹಾಸ್‌ ಶೆಟ್ಟಿ ಕೊಲೆ ಆರೋಪಿಗಳಲ್ಲಿ ಇಬ್ಬರು ಹಿಂದೂಗಳು……!

ದಕ್ಷಿಣ ಕನ್ನಡ:

     ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ 8 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಇಬ್ಬರು ಹಿಂದೂ ಯುವಕರೂ ಸೇರಿದ್ದಾರೆ. ಮಂಗಳೂರು ಮೂಲದ ಸಫ್ವಾನ್‌ ಗ್ಯಾಂಗ್‌ ಸುಹಾಸ್‌ನನ್ನು ಹತ್ಯೆ ಮಾಡಿರುವುದು ಬಯಲಾಗಿದೆ. ಇನ್ನು ಬಂಧಿತರನ್ನು ಸಫ್ವಾನ್‌(29), ನಿಯಾಜ್‌(28),ಮೊಹಮ್ಮದ್‌ ಮುಝಂಮಿಲ್(‌32), ಕಲಂದರ್‌ ಶಾಫಿ(31), ಮೊಹಮ್ಮದ್‌ ಇರಜವಾನ್‌(28), ಚಿಕ್ಕಮಗಳೂರಿನ ರಂಜಿತ್(‌19)ಹಾಗೂ ನಾಗರಾಜ್‌(20) ಎಂದು ಗುರುತಿಸಲಾಗಿದೆ. ಇನ್ನು ಸಫ್ವಾನ್‌ ಈ ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿದೆ.

   ಸುಹಾಸ್‌ ಶೆಟ್ಟಿಯ ಸ್ನೇಹಿತ ಪ್ರಶಾಂತ್‌ಗೂ ಸಫ್ವಾನ್‌ ನಡುವೆ ಎರಡು ವರ್ಷಗಳ ಹಿಂದೆ ಗಲಾಟೆ ಉಂಟಾಗಿತ್ತು. 2023ರಲ್ಲಿ ಪ್ರಶಾಂತ್‌ ಸಫ್ವಾನ್‌ಗೆ ಚೂರಿ ಇರಿದಿದ್ದ. ಈ ವೇಳೆ ಸುಹಾಸ್‌ ಪ್ರಶಾಂತ್‌ ಪರವಾಗಿ ನಿಂತಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಕೊಲೆ ಮಾಡಿದ ಬಳಿಕ ಪರಾರಿಯಾಗಿದ್ದ ಹಂತಕರು ಮಂಗಳೂರಿನಲ್ಲಿಯೇ ಅವಿತುಕೊಂಡಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು 8 ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಇದು ಪ್ರತೀಕಾರಕ್ಕಾಗಿಯೇ ನಡೆದಿರುವ ಹತ್ಯೆ ಎನ್ನಲಾಗಿದೆ. 

ಗೃಹಸಚಿವ ಜಿ.ಪರಮೇಶ್ವರ್‌ ಭೇಟಿ

    ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಂದು ಮಂಗಳೂರಿಗೆ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕಮಿಷನರ್ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಸುತ್ತಿದ್ದಾರೆ. ಗೃಹ ಸಚಿವ ಜಿ ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಜಂಟಿಯಾಗಿ ಸಭೆ ನಡೆಸಲಿದ್ದಾರೆ. ಎಡಿಜಿಪಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಕಮಿಷನರ್ ಹಾಗು ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳು ಈ ಸಭೆಯಲ್ಲಿ ಹಾಜರಿರಲಿದ್ದಾರೆ.

   ನಿನ್ನೆ ಸುಹಾಸ್‌ ಶೆಟ್ಟಿ ಕೊಲೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಮಂಗಳೂರು ಹಾಗೂ ದಕ್ಷಿಣ ಕನ್ನಡ ಬಂದ್‌ಗೆ ಕರೆ ನೀಡಿದ್ದವು. ಮಂಗಳೂರು ಬಂದ್‌ ಸಂಪೂರ್ಣ ಯಶಸ್ವಿಯಾಗಿತ್ತು. ಬಂದ್‌ ಉಲ್ಲಂಘಿಸಿ ಬೀದಿಗಿಳಿದ ಖಾಸಗಿ ಬಸ್ಸುಗಳಿಗೆ ಕಲ್ಲು ತೂರಲಾಗಿತ್ತು. ಉಡುಪಿಯಲ್ಲಿ ಮುಸ್ಲಿಂ ಯುವಕನೊಬ್ಬನಿಗೆ ಇರಿಯಲಾಗಿದೆ.

Recent Articles

spot_img

Related Stories

Share via
Copy link