ಆತ್ಮಹತ್ಯೆ ತಮಾಷೆ ಮಾಡುವ ವಿಷಯವಲ್ಲ : ಪ್ರಿಯಾಂಕ ಗಾಂಧಿ

ನವದೆಹಲಿ: 

    ಡೆತ್ ನೋಟ್ ಕುರಿತು ಜೋಕ್ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಪ್ರಧಾನಿ ಮತ್ತು ಅವರ ತಮಾಷೆಗೆ ಮನಸಾರೆ ನಗುವವರು ಮಾನಸಿಕ ಆರೋಗ್ಯದ ಸಮಸ್ಯೆಗಳ ಬಗ್ಗೆ “ಅಪಹಾಸ್ಯ” ಮಾಡುವ ಬದಲು ಉತ್ತಮ ಶಿಕ್ಷಣವನ್ನು ಪಡೆದುಕೊಳ್ಳಬೇಕು ಎಂದು ಗುರುವಾರ ವಾಗ್ದಾಳಿ ನಡೆಸಿದ್ದಾರೆ.

    ಪ್ರಧಾನಿ ಮೋದಿ ಅವರು ಬುಧವಾರ ಮಾಧ್ಯಮ ವಾಹಿನಿಯ ಸಮಾವೇಶದಲ್ಲಿ ಮಾತನಾಡುತ್ತಾ, ತಮ್ಮ ಮಗಳ ಆತ್ಮಹತ್ಯೆ ನೋಟ್ ಓದುತ್ತಿರುವ ಪ್ರಾಧ್ಯಾಪಕರೊಬ್ಬರು ಹಲವು ವರ್ಷಗಳ ತನ್ನ ಪ್ರಯತ್ನದ ಹೊರತಾಗಿಯೂ ಕಾಗುಣಿತ ತಪ್ಪಾಗಿದೆ ಎಂದು ಟೀಕಿಸಿದರು ಎಂದು ಹಾಸ್ಯ ಮಾಡಿದ್ದರು.

    ಮೋದಿಯವರ ಹಾಸ್ಯದ ವಿಡಿಯೋವನ್ನು ಟ್ಯಾಗ್ ಮಾಡಿರುವ ಪ್ರಿಯಾಂಕಾ ಗಾಂಧಿ, “ಖಿನ್ನತೆ ಮತ್ತು ಆತ್ಮಹತ್ಯೆ, ಇದು ವಿಶೇಷವಾಗಿ ಯುವಕರಲ್ಲಿ ನಗುವ ವಿಷಯವಲ್ಲ. ಎನ್ ಸಿಆರ್ ಬಿ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 2021 ರಲ್ಲಿ 1,64033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ದುರಂತ, ತಮಾಷೆಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link