ಬೆಂಗಳೂರು:
ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ರೋಶನಿಗೌಡರವರು ಭೇಟಿ ಮಾಡಿ ಕೋಲಾರ ಜಿಲ್ಲೆ , ಬಂಗಾರಪೇಟೆ ಸರಕಾರಿ ಶಾಲೆ ಶಿಕ್ಷಕಿ ಮಂಜುಳರವರಿಗೆ ಸೂಕ್ತ ರಕ್ಷಣೆ ಮತ್ತು ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶ್ರೀಮತಿ ರೋಶನಿಗೌಡರವರು ಮಾತನಾಡಿ ಸರಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕಿಯರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಪಾಠ ಮಾಡಲು ಯಾವುದೇ ಅನುಕೂಲ ಮಾಡಿಕೊಡಬೇಕು.
ಮಹಿಳಾ ಶಿಕ್ಷಕಿ ಕುಟುಂಬದ ಜವಾಬ್ಬಾರಿ ಜೊತೆಯಲ್ಲಿ , ಸಮಾಜ ಅಭಿವೃದ್ದಿಗಾಗಿ ಶ್ರಮಿಸುವಳು, ಅಂತಹ ಮಹಿಳೆಯರಿಗೆ ಭಯಭೀತಿ ಇಲ್ಲದೇ ಕೆಲಸ ಮಾಡುವಂತೆ ಆಗಬೇಕು. ಬಂಗಾರಪೇಟೆ ದುರುಂತದಿಂದ ಮಹಿಳೆಯರು ಅತಂಕದಲ್ಲಿ ಇದ್ದಾರೆ. ಮಹಿಳೆಯರು ಯಾವುದೇ ಭಯಪಡುವ ಅವಶ್ಯಕತೆ ನಿಮ್ಮ ಜೊತೆಯಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘ
ಇದೆ ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದವರು ನೀಡಿದ ಮನವಿಯನ್ನು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪರವರು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಶ್ರೀಮತಿ ಮಂಜುಳರವರಿಗೆ ಸೂಕ್ತ ರಕ್ಷಣೆ ನೀಡಲಾಗುವುದು ಎಂದು ಭರವಸೆ ನೀಡಿದರು
